
ಬೆಳ್ತಂಗಡಿ: ಆ.1ರಂದು ಬೆಳ್ತಂಗಡಿ ಓಬಿಸಿ ಮೋರ್ಚಾದ ಸಭೆ. ತಾಲೂಕು ಓಬಿಸಿ ಮೋರ್ಚಾದ ಅಧ್ಯಕ್ಷ ರತ್ನಾಕರ ಬುಣ್ಣನ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಓಬಿಸಿ ಮೋರ್ಚಾದ ಕಾರ್ಯಚಟುವಟಿಕೆ ಬಗ್ಗೆ ಹಾಗೂ ಓಬಿಸಿ ಮೋರ್ಚಾದ ಸಂಘಟನೆಯ ಬಗ್ಗೆ, ಓಬಿಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬೆಳ್ತಂಗಡಿ ಓಬಿಸಿ ಮೋರ್ಚಾದ ವೀಕ್ಷಕ ಮೋನಪ್ಪ ದೇವಸ್ಯ ಮಾಹಿತಿ ನೀಡಿದರು.
ಶಶಿಧರ್ ಕಲ್ಮಂಜ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ತಾಲೂಕು ಓಬಿಸಿ ಮೋರ್ಚಾದ ಪದಾಧಿಕಾರಿಗಳ ಸಭೆಗಳ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಒಬಿಸಿ ಮೋರ್ಚಾದ ಪ್ರಭಾರಿಗಳಾದ ಚಂದ್ರಶೇಖರ್ ಪೆನ್ನೆ ಅವರು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಶಕ್ತಿಕೇಂದ್ರಗಳಿಂದ ಒಬ್ಬೊಬ್ಬರನ್ನು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರನ್ನು ಓಬಿಸಿ ಮೋರ್ಚಕ್ಕೆ ಸಂಘಟನೆಯ ದೃಷ್ಟಿಯಿಂದ ಸೇರಿಸಿಕೊಳ್ಳುವಂತೆ ಮಾಹಿತಿ ನೀಡಿದರು.
ಮಂಡಲದ ಪ್ರಭಾರಿಗಳಾದ ಅಶ್ವಿನಿ ನಾಯಕ್ ಸಂಘಟನೆ ದೃಷ್ಟಿಯಿಂದ ಮುಂದಿನ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ತಾಲೂಕು ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಭಂಡಾರಿ ವೇಣೂರು,
ವಿಠಲ ಆಚಾರ್ಯ ಗುರುವಾಯನಕೆರೆ ಹಾಗೂ ಓಬಿಸಿ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಭಂಡಾರಿ ಸ್ವಾಗತಿಸಿ,
ಉಪಾಧ್ಯಕ್ಷ ರಾಜೇಶ್ ಮುಡುಕೋಡಿ ಧನ್ಯವಾದ ಮಾಡಿದರು.