
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ರೂರಲ್ ಡೆವಲಪ್ ಮೆಂಟ್ ಪ್ರಾಜೆಕ್ಟ್ ಬಿ.ಸಿ ಟ್ರಸ್ಟ್, ಎಸ್.ಡಿ.ಎಂ ಭಜನಾ ಪರಿಷತ್ ಹಾಗೂ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಗುರುವಾಯನಕೆರೆ ಜಂಟಿಯಾಗಿ ಜು. 20ರಂದು ಆಯೋಜಿಸಿದ್ದ ಆಟಿಡೊಂಜಿ ಕೆಸರ್ದ ಗೊಬ್ಬು 2025 ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ರೂರಲ್ ಡೆವಲಪ್ ಮೆಂಟ್ ಪ್ರಾಜೆಕ್ಟ್ ಬಿ.ಸಿ ಟ್ರಸ್ಟ್, ಇದರ ನಿರ್ದೇಶಕ ದಿನೇಶ್ ಕುಮಾರ್ ಅವರ ಸೂಚನೆಯಂತೆ ಇತ್ತೀಚೆಗೆ ಎಕ್ಸೆಲ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರನ್ನು ಭೇಟಿ ಮಾಡಿ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಲಭಿಸಿದ “ವಿಜಯ ರತ್ನ” ಪ್ರಶಸ್ತಿಯನ್ನು ಪಡೆದುದಕ್ಕಾಗಿ ಗೌರವಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ರೂರಲ್ ಡೆವಲಪ್ ಮೆಂಟ್ ಪ್ರಾಜೆಕ್ಟ್ ಬಿ.ಸಿ ಟ್ರಸ್ಟ್, ಗುರುವಾಯನಕೆರೆ ವಲಯದ ಯೋಜನಾಧಿಕಾರಿ ಅಶೋಕ್ ಕುಮಾರ್, ಎಸ್.ಡಿ.ಎಂ ಭಜನಾ ಪರಿಷತ್ ಗುರುವಾಯನಕೆರೆ ವಲಯದ ಕಾರ್ಯದರ್ಶಿ ಸಂದೇಶ್ ಮದ್ದಡ್ಕ, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಎಸ್.ಡಿ.ಎಂ ಐ.ಟಿ.ಐ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಮತ್ತು ಎಸ್.ಡಿ.ಎಂ ಭಜನಾ ಪರಿಷತ್ ನ ಗುರುಗಳು ಹಾಗೂ ಶೌರ್ಯ ತಂಡದ ನಾಗೇಶ್ ಉಪಸ್ಥಿತರಿದ್ದರು.