
ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಆ. 10ರಿಂದ, 12ರವರೆಗೆ ನಡೆಯುವ ಶ್ರೀ ಗುರುರಾಯರ 354ನೇ ಆರಾಧನ ಮಹೋತ್ಸವದ ಅಂಗವಾಗಿ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆ ಜು.31ರಂದು ಮಠದಲ್ಲಿ ನಡೆಯಿತು.
ವಸಂತ ಸುವರ್ಣ ಸ್ವಾಗತಿದರು. ಟ್ರಸ್ಟ್ ಅಧ್ಯಕ್ಷ ಪೀತಾಂಬರ ಹೇರಾಜೆ ಅಧ್ಯಕ್ಷತೆ ವಹಿಸಿ ಸರ್ವರ ಸಹಕಾರವನ್ನು ಕೋರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಮನವಿ ಮಾಡಿದರು. ಡಾ.ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮದ ವಿವರಣೆಯನ್ನು ನೀಡಿ ಯಶಸ್ವಿಯಾಗಿ ನಡೆಯುವರೆ ಸಲಹೆಗಳನ್ನು ನೀಡಿದರು. ಉಪಾಧ್ಯಕ್ಷ ವಿ. ಆರ್. ನಾಯಕ್, ಸೋಮೇ ಗೌಡ, ಮಂಜುನಾಥ ರೈ, ಸುಜಿತಾ ವಿ. ಬಂಗೇರ, ಸುಶೀಲಾ ಎಸ್. ಹೆಗ್ಡೆ, ಕೃಷ್ಣ ಶೆಟ್ಟಿ, ಬಂಗಾರು, ರಾಜೇಶ್ ಶೆಟ್ಟಿ ಲಾಯಿಲ, ಸೌಮ್ಯ ಲಾಯಿಲ, ವಿಜಯಕುಮಾರ್ ಕುಸುಮಾವತಿ ಮುಂತಾದವರು ಹಾಜರಿದ್ದರು. ಪ್ರೊ. ಎ. ಕೃಷ್ಣಪ್ಪ ಪೂಜಾರಿ ವಂದಿಸಿದರು.