
ಬೆಳ್ತಂಗಡಿ: ಶ್ರೀ ನಾಗಬ್ರಹ್ಮ ದೇವಸ್ಥಾನ ಮೇಲಂತಬೆಟ್ಟು ಇದರ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ವಿಧಾನ ಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್ ಅವರು ಜು.29ರಂದು ನೆರವೇರಿಸಿದರು.
ಈ ಕಾಮಗಾರಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ 4ಲಕ್ಷ ಮಂಜೂರುಗೊಳಿಸಿ ಕ್ಷೇತ್ರಕ್ಕೆ ಶೀಟ್ ಹಾಗೂ ಇಂಟರ್ಲಾಕ್ ಅಳವಡಿಸಿದ್ದಾರೆ.
ಈ ಸಂದರ್ಭದಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ಕೆ. ಎಸ್., ಗೋಪಾಲಕೃಷ್ಣ ತಂತ್ರಿಗಳು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೈಲೇಶ್ ಕುಮಾರ್, ಪ್ರಗತಿಪರ ಕೃಷಿಕ ಕಿಶೋರ್ ಕುಮಾರ್ ಕುರ್ತೊಡಿ, ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ಮಧುರ ರಾಘವ ಅತ್ತೋಡಿ, ಕೋಶಾಧಿಕಾರಿ ಹರ್ಷ ಹೆಚ್. ಆರ್. ಪಕ್ಕಿದಕಲ, ಪ್ರಧಾನ ಅರ್ಚಕ ಅನಂತ ಇರ್ವತ್ರಾಯ ಹಾಗೂ ಸದಸ್ಯರು ಉಪಸ್ಥಿತರಿದ್ದರು.