
ಬೆಳ್ತಂಗಡಿ: ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ವಾರ್ಷಿಕ ಮಹಾಸಭೆ ಜು.28ರಂದು ನಡೆಯಿತು. ಯು.ಇ.ಎ ರಾಜ್ಯ ಉಪಾಧ್ಯಕ್ಷ ಅಬ್ಬೂಬಕರ್ ಉಜಿರೆ ಅಧ್ಯಕ್ಷತೆ ವಹಿಸಿದ್ದರು.
ಯು.ಇ.ಎ. ಅಧ್ಯಕ್ಷ ಸಿರಾಜ್ ಮಹಾಸಚಿವ ಇಮ್ತಿಯಾಜ್ ಹಜಾಜ್, ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ನ ದೃಷ್ಟಿಕೋನ ಮತ್ತು ಯೋಜನೆಗಳ ಕುರಿತು ವಿವರಿಸಿದರು. ಬೆಳ್ತಂಗಡಿ ವಲಯದ ಸಮಿತಿಯ ರಚನೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎಸ್.ಎ.ಖಾದರ್, ಅಧ್ಯಕ್ಷರಾಗಿ ಫಝಲ್ ಉರ್ ರಹ್ಮಾನ್, ಉಪಾಧ್ಯಕ್ಷರಾಗಿ ರಹ್ಮಾನ್ ಉಜಿರೆ, ಅಶ್ರಫ್ ಉಜಿರೆ, ಯಹ್ಯಾ ಉಜಿರೆ, ಮುಖ್ಯ ಕಾರ್ಯದರ್ಶಿಯಾಗಿ ಹಮ್ಜಾ ಉಜಿರೆ, ಖಜಾಂಚಿಯಾಗಿ ಹರೀಸ್ (ಅಚ್ಚಿ), ಸಹ ಕಾರ್ಯದರ್ಶಿಗಳಾಗಿ ಅಶ್ವೀರ್, ಶಲೀಲ್, ಸಾದಿಕ್, ಸಲೀಮ್, ಕ್ರೀಡಾ ಕಾರ್ಯದರ್ಶಿಗಳಾಗಿ ರಿಹಾನ್, ಶರರೀಫ್ ನೆರಿಯಾ, ನಿಜಾರ್, ಹಕೀಮ್.
ಯು.ಸಿ.ಎಲ್. ಆಯ್ಕೆ ಸಮಿತಿ: ಅಬ್ಬೂಬಕರ್ ಉಜಿರೆ, ಉಮರ್ ಅಬ್ಬಾ ಇಂಡಿಯನ್ ರೌಫ್, ಮಾಧ್ಯಮದ ವಿಭಾಗ ಇಂಚಾರ್ಜ್, ಅಶ್ರಫ್ ಅಲಿ ಆಯ್ಕೆಯಾದರು.