
ಬೆಳ್ತಂಗಡಿ: ತುಳುನಾಡಿನ ಪದ್ದತಿಯಂತೆ ಆಟಿ ಅಮಾವಾಸ್ಯೆಯ ದಿನವನ್ನು ಮುಗ್ಗ ಗುತ್ತಿನಲ್ಲಿ ದುರ್ಗಾಂಬಿಕಾ ದೇವಿಯ ಆರಾಧನೆಯೊಂದಿಗೆ, ದೈವಗಳಿಗೆ ಮತ್ತು ಅಗಲಿದ ಹಿರಿಯರನ್ನು ನೆನೆಸುತ್ತಾ ಸಾಂಪ್ರದಾಯಿಕವಾಗಿ ಕುಟುಂಬದ ಸದಸ್ಯರ ಭಾಗವಹಿಸುವಿಕೆಯೊಂದಿಗೆ ಜು. 24ರಂದು ಆಚರಿಸಲಾಯಿತು.
ಗುತ್ತಿನ ಮನೆಗೆ ಹೊಸದಾಗಿ ನೂತನ ಶೈಲಿಯ ಧ್ವನಿವರ್ಧಕ ವ್ಯವಸ್ಥೆಯನ್ನು ಕಲ್ಪಿಸಿದ ರಾಜಶ್ರೀ ರಮಣ್, ಅಂಗಣಕ್ಕೆ ವಿದ್ಯುತ್ತಿನ ಮೆರಗನ್ನು ನೀಡಿದ ಕೆ ಪ್ರಭಾಕರ ಬಂಗೇರ, ಕುಟುಂಬಸ್ಥರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು. ಆಡಳಿತ ಮೋಕ್ತೇಸರ ಪೀತಾಂಬರ ಹೇರಾಜೆ, ಅಧ್ಯಕ್ಷ ಕೆ. ಹರೀಶ್ ಕುಮಾರ್, ಕೋಶಾಧಿಕಾರಿ ದಿನೇಶ್ ಪಿದಮಲೆ, ಟ್ರಸ್ಟಿಗಳಾದ ತುಕಾರಾಮ ಬಂಗೇರ, ಜಾನಕಿ ಕೇಶವ, ಗಣ್ಯರಾದ ಡಾ. ರಾಜಾರಾಮ್, ಚರಣ್ ಕುರ್ತೋಡಿ, ಮಿತ್ರ ಹೆರಾಜೆ, ಕೆ. ಯೋಗೇಶ್ ಕುಮಾರ್, ಶಾರದಾ ಕೇದೆ, ಇತರ ಪದಾಧಿಕಾರಿಗಳು ಹಾಗೂ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಶಾಂತ ಪೂಜಾರಿ ಕಂಡೆಕ್ಯಾರ್, ಕೀರ್ತಿ ಬಂಗೇರ, ಪ್ರಶಾಂತ್ ಶಾಂತಿ ಪೂಜಾ ವಿಧಿ ವಿಧಾನದಲ್ಲಿ ಸಹಕರಿಸಿದರು.