
ನಡ: ಜು. 27ರಂದು ಭಾರಿ ಗಾಳಿ ಮಳೆಗೆ ಗ್ರಾಮದ ಅಂತ್ರಾಯಬೈಲು ಸುಂದರ ಗೌಡರವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಅವರು ಭೇಟಿ ನೀಡಿ ತಾತ್ಕಾಲಿಕ ವಾಸಕ್ಕೆ ಮನೆಯ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಿ, ಸರಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು.

ಕರುಣಾಕರ ನಡ, ಕುಶಾಲಪ್ಪ ಗೌಡ ಹಾಗೂ ಸ್ಥಳೀಯ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.