
ಮದ್ದಡ್ಕ: ಇಲ್ಲಿನ ಮೊದಲೆ ಎಂಬಲ್ಲಿ ಧಾರಾಕಾರ ಮಳೆಗೆ ರಸ್ತೆಯೆ ಕೊಚ್ಚಿಕೊಂಡು ಹೋಗಿದೆ. ಮದ್ದಡ್ಕದಿಂದ ಪಡಂಗಡಿಗೆ ಸಂಪರ್ಕ ರಸ್ತೆಯ ಕುದ್ರೆಂಜ ಸಮೀಪ ರಸ್ತೆ ಕಳೆದ ಬಾರಿಯ ಮಳೆಗೆ ಕೊಚ್ಚಿಹೋಗಿತ್ತು.
ಈ ಬಾರಿ ಕೇವಲ ನೂರು ಮೀಟರ್ ಅಂತರದಲ್ಲಿ ರಸ್ತೆ ಕೊಚ್ಚಿಕೊಂಡು ಹೋಗಿದೆ.ಕಳೆದ ಬಾರಿ ಕೊಚ್ಚಿಕೊಂಡು ಹೋದ ರಸ್ತೆಯ ರಿಪೇರಿ ಮಣ್ಣು ಹಾಕಿ ಮಾಡಿರುವುದರಿಂದ ಅದು ಕೊಚ್ಚಿಕೊಂಡು ಹೋಗುವ ಭೀತಿಯಿದೆ.
ಈಗ ಸ್ಥಳೀಯರು ಸಂಪರ್ಕಕ್ಕೆ ಹೆಣಗಾಡುತ್ತಿದ್ದಾರೆ.ಶಾಲಾ ಮಕ್ಕಳು,ಹೈನುಗಾರರು,ನಿತ್ಯ ಕಾರ್ಮಿಕರು ಓಡಾಡುವ ರಸ್ತೆಯೇ ಹೀಗಾಗಿದೆ. ಸ್ಥಳೀಯರು ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.