ಬೆಳಾಲು: ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿಯಿಂದ ಶ್ರೀ ಮಾಯ ಮಹಾದೇವ ದೇವಸ್ಥಾನದ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮ, ವನ ಮಹೋತ್ಸವ ನಡೆಯಿತು.
ದೇವಸ್ಥಾನದ ಅರ್ಚಕ ಕೇಶವರಾಮಯಾಜಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಮಾಯ ಗುತ್ತು ಪುಷ್ಪ ದಂತ ಜೈನ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುರೇಶ್ ಭಟ್, ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ, ಅಶ್ವಥ್ ಗುಂಡ್ಯ, ಅರಣ್ಯ ಇಲಾಖೆಯ ದಡಂತಮಲೆ ಶಾಖೆ ಉಪ ವಲಯ ಅರಣ್ಯಾಧಿಕಾರಿ ಬಿ. ಜೆರಾಲ್ಡ್ ಡಿಸೋಜ, ಬೆಳಾಲು ಗಸ್ತು ಅರಣ್ಯ ಪಾಲಕ ಕೆ. ಎನ್. ಜಗದೀಶ್, ಬೆಳಾಲು ಅರಣ್ಯ ವೀಕ್ಷಕ ಸಂತೋಷ್ ಪೂಜಾರಿ, ಬೆಳಾಲು ಕುಂಡಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಂಗಾಧರ ಗೌಡ, ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.