ಕೊಡಿಯಾಲ್ ಬೈಲು ಶಾಲೆಗೆ ಕೈ ತೊಳೆಯುವ ನೀರಿನ ಘಟಕ ಕೊಡುಗೆ ಹಾಗೂ ಉದ್ಘಾಟನೆ

0

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರು, ಕೊಡಿಯಾಲ್ ಬೈಲು ಸ.ಹಿ.ಪ್ರಾ ಶಾಲಾ ಶಾಲಾಭಿವೃದ್ಧಿ ಸಮಿತಿ ನಾಮನಿರ್ದೇಶಕಿ ರತ್ನಾವತಿ ಬಾಲಕೃಷ್ಣ ಗೌಡ ಮಾವಿನಕಟ್ಟೆ ಹಾಗೂ S.K.D.R.P ಒಕ್ಕೂಟ ಕಾನರ್ಪ ಇದರ ಸಹಯೋಗದೊಂದಿಗೆ ರೂ.26,000/- ವೆಚ್ಚದಲ್ಲಿ ಸ.ಹಿ.ಪ್ರಾ.ಶಾಲೆ ಕೊಡಿಯಾಲ್ ಬೈಲು ಶಾಲೆಗೆ ಸುಸಜ್ಜಿತವಾದ ಕೈ ತೊಳೆಯುವ ನೀರಿನ ಘಟಕವನ್ನು ಕೊಡುಗೆಯಾಗಿ ನಿರ್ಮಿಸಿ ಕೊಡಲಾಯಿತು. ಈ ನೀರಿನ ಘಟಕವನ್ನು ಕಡಿರುದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ ಗೌಡ ಉದ್ಘಾಟಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಘವೇಂದ್ರ ಪಟವರ್ಧನ್ ಕೋಡಿ, ಬಾಲಕೃಷ್ಣ ಗೌಡ ಮಾವಿನಕಟ್ಟೆ, ಮಹೇಶ್ ಕೌಡಂಗೆ ಶಾಲಾ ಮುಖ್ಯೋಪಾಧ್ಯಾಯ ಫಿಲೋಮಿನಾ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here