ಬೆಳ್ತಂಗಡಿ: ಜು. 22ರಂದು ಚಾರ್ಮಾಡಿ ಸಾರ್ವಜನಿಕ ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಸಹಕರಿಸುವಂತೆ ಶಾಸಕ ಹರೀಶ್ ಪೂಂಜಾ ಅವರ ಜೊತೆ ವಿನಂತಿಸಿಕೊಂಡಾಗ ರುದ್ರ ಭೂಮಿಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕರಿಂದ ಭರವಸೆ ನೀಡಿದರು.

ಬಿಜೆಪಿ ಬೆಳ್ತಂಗಡಿ ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ ಆರಣೆಪಾದೆ, ಕೃಷ್ಣ ರಾವ್ ಕೋಡಿತ್ತಿಲು ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ ಹೊಸಮಠ, ಚಾರ್ಮಾಡಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಗಣೇಶ್ ಕೋಟ್ಯಾನ್, ಮಂಡಲ ಬಿಜೆಪಿ ಯುವಮೋರ್ಚ ಉಪಾಧ್ಯಕ್ಷರಾದ ಸುಧೀರ್ ಚಾರ್ಮಾಡಿ, ದಿವಿನೇಶ್ ಚಾರ್ಮಾಡಿ, ಪವನ್ ರಾವ್ ಚಾರ್ಮಾಡಿ ಉಪಸ್ಥಿತರಿದ್ದರು.