
ಬೆಳ್ತಂಗಡಿ: ಜು. 21ರಂದು ಬೆಳ್ತಂಗಡಿ ಮಂಡಲ ಪ್ರವಾಸ ಹಾಗೂ ಮಹಿಳಾ ಮೋರ್ಚಾದ ಕಾರ್ಯಗಾರದ ಜೊತೆಯಲ್ಲಿ ಆಟಿಡೊಂಜಿ ದಿನ ಹಾಗೂ ಪೋಷನ್ ಪಕ್ವಾಡ್ ಕಾರ್ಯಕ್ರಮ ನಡೆಯಿತು.
ಪಕ್ಷದ ಕಚೇರಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಗರ್ಭಿಣಿ ಕವಿತಾ ಅವರಿಗೆ ಫಲಪುಷ್ಪ ಸೀರೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ.ಮಂಜುಳಾ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಕಿತ ಶೆಟ್ಟಿ ಹಾಗೂ ಸಂಧ್ಯಾ ವೆಂಕಟೇಶ್, ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾ ಪ್ರಭಾರಿ ಬಬಿತಾ ಹಾಗೂ ಬೆಳ್ತoಗಡಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ ಹಾಗೂ ಜಿಲ್ಲಾ ಮಹಿಳಾ ಮೋರ್ಚ ಕಾರ್ಯದರ್ಶಿ ಅಮಿತಾ ಕುಶಾಲಪ್ಪ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಪೂರ್ಣಿಮಾ ಹಾಗೂ ತುಳಸಿ ಹಾಗೂ ಮಹಿಳಾಮೋರ್ಚಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಗೂ ಪಂಚಾಯತ್ ಸದಸ್ಯರುಗಳು ಹಾಜರಿದ್ದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ, ಮಹಿಳಾ ಮೋರ್ಚಾವನ್ನು ಯಾವ ರೀತಿ ನಡೆಸಿಕೊಂಡು ಹೋಗಬೇಕು ಹಾಗೂ ಹಾಗೂ ಮಹಿಳಾ ಮೋರ್ಚಾದ ಎಲ್ಲಾ ಸದಸ್ಯರುಗಳು, ಪದಾಧಿಕಾರಿಗಳು ಮನ್ ಕಿ ಬಾತ್ ಅನ್ನು ಕೇಳಿ ಹಾಗೂ ಸರಳ್ ಆಪ್ ಗೆ ಅಪ್ಲೋಡ್ ಮಾಡಬೇಕು ಅಮ್ಮನ ಹೆಸರಿನಲ್ಲಿ ಪ್ರತಿಯೊಬ್ಬರೂ ಗಿಡ ನೆಟ್ಟು ಸರಳಾಪುಗೆ ಅಪ್ಲೋಡ್ ಮಾಡಬೇಕು. ಬೂತ್ ಮಟ್ಟದಿಂದ ಮಹಿಳೆಯರ ಸಂಪರ್ಕ ಮಾಡಿ ಪಕ್ಷದ ಕಾರ್ಯಕರ್ತರಲ್ಲಿ ತೊಡಗುವಂತೆ ಮಾಡಬೇಕು ಎಂದು ಹೇಳಿದರು.
ಮಹಿಳಾ ಮೋರ್ಚಾದ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಮಾತನಾಡಿ ಮುಂದೆ ಮಹಿಳಾ ಮಹಿಳಾ ಮೋರ್ಚಾದಿಂದ ವಿಶೇಷವಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಲ್ಲರ ಸಹಕಾರವು ಬೇಕು ಹಾಗೂ ಎಲ್ಲಾ ಪದಾಧಿಕಾರಿಗಳು ಸದಸ್ಯರು ನಮ್ಮೊಂದಿಗೆ ಕೈಜೋಡಿಸಬೆಕೆಂದು ಹೇಳಿದರು.
ಮಹಿಳಾ ಮೋರ್ಚಾದ ಪ್ರತಿಯೊಬ್ಬರು ಆಷಾಢ ಮಾಸದಲ್ಲಿ ಮಾಡುವ 26 ಬಗೆಯ ಖಾದ್ಯಗಳನ್ನು ತಮ್ಮ ಕೈಯಾರೆ ಮಾಡಿ ತಂದು ಎಲ್ಲರಿಗೂ ಉಣ ಬಡಿಸಿದರು. ಪೂರ್ಣಿಮಾ ಸ್ವಾಗತಿಸಿ, ತುಳಸಿ ಉಮೇಶ್ ಕಾರ್ಯಕ್ರಮ ನಿರೂಪಿಸಿ, ಶಶಿಕಲಾ ಧನ್ಯವಾದವಿತ್ತರು.