ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿಯಿಂದ ಮಿತ್ತಬಾಗಿಲು ಗ್ರಾಮದ ಜನಾರ್ದನ ಗೌಡರಿಗೆ ರೂ 12,000/- ಮೌಲ್ಯದ ಅತ್ಯಾಧುನಿಕ ತಂತ್ರಜ್ಞಾನದ ವೀಲ್ ಚೆಯರ್ ನ್ನು ಜು. 21ರಂದು ನ್ಯಾಯವಾದಿ ಬಿ.ಕೆ.ಧನಂಜಯ ಅವರ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.
ಎರಡು ವರ್ಷದ ಹಿಂದೆ ಇವರಿಗೆ ರೂ 16,000 ಮೌಲ್ಯದ ವಿಶೇಷ ಮರದ ಮಂಚ ಮತ್ತು ರೂ 11,000/- ನಗದು ನೀಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷ ಪ್ರಕಾಶ್ ಪ್ರಭು, ಕಾರ್ಯದರ್ಶಿ ಡಾ. ಎಂ.ಎಂ. ದಯಾಕರ್ ಧನಂಜಯ್ ರಾವ್, ಡಾ. ಶಶಿಕಾಂತ ಡೋಂಗ್ರೆ, ವಿದ್ಯಾಶ್ರೀ ಹರ್ಷೇಂದ್ರ, ರೋನಾಲ್ಡ ಲೋಬೊ, ಪ್ರೊ.ರಾಧಾಕೃಷ್ಣ ಮಯ್ಯ, ತ್ರಿವಿಕ್ರಮ್ ಹೆಬ್ಬಾರ್, ಆ್ಯನ್ ರಾಜಶ್ರೀ ಧನಂಜಯ್, ಆ್ಯನ್ ಗೀತಾ ಪ್ರಕಾಶ ಪ್ರಭು, ಆ್ಯನ್ ಡಾ.ಅನಿತಾ ದಯಾಕರ್ ಉಪಸ್ಥಿತರಿದ್ದರು.