ಬಂದಾರು: ಶಾಸಕ ಪೂಂಜರಿಂದ ರಿಕ್ಷಾ ತಂಗುದಾಣ ಉದ್ಘಾಟನೆ

0

ಬಂದಾರು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಹರೀಶ್ ಪೂಂಜ ಅವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ರೂ 5ಲಕ್ಷ ಅನುದಾನದಲ್ಲಿ ಬಂದಾರು ಗ್ರಾಮ ಬೈಪಾಡಿ ಸರ್ಕಲ್ ಬಳಿ ಜು.21ರಂದು ರಿಕ್ಷಾ ತಂಗುದಾಣವನ್ನು ಶಾಸಕ ಹರೀಶ್ ಪೂಂಜ ಲೋಕಾರ್ಪಣೆಗೊಳಿಸಿದರು.

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಪೆರ್ಲ -ಬೈಪಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಉಮೇಶ್ ಗೌಡ ಅಂಗಡಿಮಜಲು, ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಗೌಡ, ಪೆರ್ಲ -ಬೈಪಾಡಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಡೀಕಯ್ಯ ಗೌಡ, ಕಾರ್ಯದರ್ಶಿ ಲೋಹಿತ್ ಗೌಡ, ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ., ಕಣಿಯೂರು ಮಹಾಶಕ್ತಿ ಕೇಂದ್ರ ಯುವಮೋರ್ಚಾ, ಸಹಸಂಚಾಲಕ ಲೋಕ್ಷತ್ ಗೌಡ, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಜೆoಕ್ಯಾರ್, ಪ್ರಮುಖರಾದ ಹೊನ್ನಪ್ಪ ಗೌಡ, ಲಿಂಗಪ್ಪ ಗೌಡ, ಆನಂದ ಗೌಡ, ಆಟೋ ಚಾಲಕ-ಮಾಲಕ ವೃಂದ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here