ವೇಣೂರು: ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಸಂಘ ಮತ್ತು ಇತರ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಉಪ ಪ್ರಾಂಶುಪಾಲ ವೆಂಕಟೇಶ್ ತುಳುಪುಳೆ ಅವರ ಅಧ್ಯಕ್ಷತೆಯಲ್ಲಿ ಜು.19ರಂದು ನಡೆಯಿತು.
ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿ ಗಳಾಗಿ ರೋಟರಿ ಕ್ಲಬ್ ಫಲ್ಗುಣಿ ಸಿದ್ಧಕಟ್ಟೆಯ ಅಧ್ಯಕ್ಷ ರೊ. ದುರ್ಗಾ ದಾಸ್ ಶೆಟ್ಟಿ, ಕಾರ್ಯದರ್ಶಿ ರೊ. ಟೀನಾ ಡಿಕೋಸ್, ಲಯನ್ಸ್ ಕ್ಲಬ್ ವೇಣೂರಿನ ಕಾರ್ಯದರ್ಶಿ ಲ. ಜಯರಾಮ ಹೆಗ್ಡೆ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ಸುಕನ್ಯ ಪ್ರಭು, ನೆಲ್ಸನ್ ಹೆರಾಲ್ಡ್ ಕ್ಯಾಸ್ಟಲಿನೊ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಸಿದ್ದ ಕಟ್ಟೆ, ಲಯನ್ಸ್ ಕ್ಲಬ್ ವೇಣೂರು, ಎನ್.ಎಸ್.ಎಸ್ ಘಟಕ ಮತ್ತು ಮತದಾನ ಸಾಕ್ಷರತಾ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ನೆರವೇರಿತು.
ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ರವೀಂದ್ರ ಕೆ. ಸ್ವಾಗತಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಸುಶೀಲಾ ಜಿ. ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಮಾಜ ವಿಜ್ಞಾನ ಶಿಕ್ಷಕಿ ಪ್ರೇಮ ಕೆ. ಧನ್ಯವಾದವಿತ್ತರು.