ಕಳೆಂಜ: ಕಾಯರ್ತಡ್ಕ ಗೌಡರ ಯಾನೆ ಒಕ್ಕಲಿಗರ ಯುವ ಸೇವಾ ಸಂಘದಿಂದ 10ನೇ ಸೇವಾ ಯೋಜನೆಯನ್ನು ಕಳೆಂಜ ಗ್ರಾಮದ ಕುರುoಬುಡೆಲು ನಿವಾಸಿ ದೇಜಮ್ಮ ಅವರಿಗೆ ಅನಾರೋಗ್ಯದ ಸಮಸ್ಯೆಗೆ ಸಹಾಯ ಹಸ್ತವಾಗಿ 25, 000ರೂ.ನ್ನು ವಿತರಿಸಲಾಯಿತು.
ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಮರಕ್ಕಡ, ಉಪಾಧ್ಯಕ್ಷ ಯೋಗೀಶ್ ಗೌಡ ಕುಲಾಡಿ, ಮಂಜುನಾಥ ಗೌಡ ಹಾರಿತ್ತಕಜೆ, ಹರೀಶ್ ಕೆ. ಬಿ. ಕೊಯಿಲ, ಉಮೇಶ್ ಗೌಡ ನಿಡ್ಡಾಜೆ, ತಿಮ್ಮಪ್ಪ ಗೌಡ ಬಾಯಿತ್ತಾರು ಉಪಸ್ಥಿತರಿದ್ದರು.