ಧರ್ಮಸ್ಥಳ: ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ “ನೇಜಿ ನೆಡುವ ಕಾರ್ಯಕ್ರಮ”ವನ್ನು ಪರಿಸರ ಸಂಘದಿಂದ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪರಿಸರ ಸಂಘದ ವಿಧ್ಯಾರ್ಥಿಗಳು, ಶಿಕ್ಷಕರು, ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ಹಾಗೂ ಶಾಲಾ ಬೋಧಕೇತೆರ ಸಿಬ್ಬಂದಿಗಳು ಸೇರಿ ಭತ್ತದ ನಾಟಿ ಮಾಡಿದರು.
ಕಾರ್ಯಕ್ರಮವನ್ನು ಶಾಲೆಯ ಪರಿಸರ ಸಂಘದ ಶಿಕ್ಷಕರು ವ್ಯವಸ್ಥಿತವಾಗಿ ಸಂಯೋಜಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು. ತುಳು ಪಾರ್ದಾನವನ್ನು ಹಾಡಿಸಿ ಸಂಬ್ರಮಪಟ್ಟರು. ಭತ್ತ ಹೇಗೆ ನೆಡುವುದು ಎನ್ನುವ ಪ್ರತ್ಯಾಕ್ಷಿಕೆಯನ್ನು ಶಾಲಾ ಮುಖ್ಯ ಶಿಕ್ಷಕಿ ಪರಿಮಳ ಎಂ.ವಿ. ವಿಧ್ಯಾರ್ಥಿಗಳು ನೇಜಿ ನಾಟಿ ಮಾಡಿ ಖುಷಿ ಪಟ್ಟರು. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಶಿಷ್ಟಾಚಾರ, ಶಿಸ್ತು, ಆರೋಗ್ಯದ ಮಹತ್ವ ಹಾಗೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.