ಕೊಕ್ಕಡ ಆನೆ ದಾಳಿಗೆ ವ್ಯಕ್ತಿ ಬಲಿ ಪ್ರಕರಣ-ಮುಂಜಾನೆ 3ಗಂಟೆವರೆಗೆ ಕಾರ್ಯಾಚರಣೆ-ಅರಣ್ಯದೊಳಗೆ ಸೇರಿದ ಜೋಡಿ ಆನೆ-ಅಧಿಕಾರಿಗಳಿಂದ ಪರಿಶೀಲನೆ-ಮೋರಿ ಹಾಕದ್ದರಿಂದ ಮುಚ್ಚಿ ಹೋಗಿತ್ತಾ ಆನೆ ಕಂದಕ?

0

ಕೊಕ್ಕಡ: ಸೌತಡ್ಕದಲ್ಲಿ ಜು. 17ರಂದು ಆನೆ ದಾಳಿಗೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆಯ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಜು.18ರ ಮುಂಜಾನೆ 3ಗಂಟೆಯ ತನಕ ಆನೆಯ ಚಲನವಲನ ಗಮನಿಸುತ್ತಾ, ಕಾರ್ಯಾಚರಣೆ ನಡೆಸಿದ್ದಾರೆ.

ಖಾಸಗಿ ಜಾಗದಿಂದ ಮೀಸಲು ಅರಣ್ಯಕ್ಕೆ ತೆರಳಿರುವ ಜೋಡಿ ಆನೆ ವ್ಯಕ್ತಿಯ ಸಾವಿಗೆ ಕಾರಣವಾದ ಜೋಡಿ ಆನೆಗಳು ಇದೀಗ ಮೀಸಲು ಅರಣ್ಯದೊಳಗೆ ಸೇರಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸುದ್ದಿ ಬಿಡುಗಡೆಗೆ ತಿಳಿಸಿದ್ದಾರೆ.

ಕೌಕ್ರಾಡಿಯ ಕಂಚಿನಡ್ಕದಲ್ಲಿ ಅಧಿಕಾರಿಗಳಿಂದ ಪರಿಶೀಲನೆ: ಕೌಕ್ರಾಡಿ ಗ್ರಾಮರ ಕಂಚಿನಡ್ಕದಲ್ಲಿ ಜು.18ರಂದು ಬೆಳಗ್ಗಿನಿಂದಲೇ ಅರಣ್ಯ ಇಲಾಖೆಯ ಪ್ರೊಬೇಷನರಿ ಡಿಸಿಎಫ್ ಹಸ್ತಾಶೆಟ್ಟಿ ಸೇರಿದಂತೆ ಅಧಿಕಾರಿಗಳು ಸೇರಿದ್ದು, ಆನೆಗಳ ಚಲನವಲನವನ್ನು ಗಮನಿಸುತ್ತಿದ್ದಾರೆ. ಕಾಡಿನಿಂದ ಹೊರಬಂದಿದ್ದು ಹೇಗೆ ಅನ್ನುವ ಕುರಿತಾಗಿಯೂ ಪರಿಶೀಲಿಸುತ್ತಿದ್ದಾರೆ.

ಮೋರಿ ಹಾಕದಿರುವುದರಿಂದ ಮುಚ್ಚಿದ ಆನೆ ಕಂದಕ, ಅದರಿಂದಲೇ ಬಂದವಾ ಆನೆಗಳು? ಕೌಕ್ರಾಡಿಯ ಕಂಚಿನಡ್ಕಡದಲ್ಲಿ ಮೋರಿಗೆ ಕೆಲ ವರ್ಷಗಳಿಂದ ಹಾಕಿಲ್ಲ, ಇದರಿಂದಾಗಿ ಆನೆ ಕಂದಕಕ್ಕೆ ನೀರು ತುಂಬಿ, ಮಣ್ಣು ಬಿದ್ದು, ಅದೇ ದಾರಿಯಿಂದಾಗಿ ಆನೆಗಳು ಕಾಡಿನಿಂದ ನಾಡಿಗೆ ಬಂದಿರಬಹುದು ಅನ್ನುವ ಅನುಮಾನಗಳಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here