
ಬೆಳಾಲು: ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಆ. 8ರಂದು ನಡೆಯುವ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಕ್ಷೇತ್ರದ ಆಡಳಿತ ಮುಕ್ತೇಸರರಾದ ಜೀವಂದರ್ ಕುಮಾರ್ ಜೈನ್ ಬೆಳಾಲು ಗುತ್ತು, ಅಸ್ತ್ರಣ್ಣರಾದ ಗಿರೀಶ್ ಬಾರಿತ್ತಾಯ ಪಾರಳ , ಅಧ್ಯಕ್ಷರಾದ ಶ್ರೀನಿವಾಸ್ ಗೌಡ ವಕೀಲರು, ಪ್ರಧಾನ ಕಾರ್ಯದರ್ಶಿಗಳಾದ ದುರ್ಗ ಪ್ರಸಾದ್ ಕೆಮು೯ಣ್ಣಾಯ, ಕಾರ್ಯದರ್ಶಿ ಸತೀಶ್ ಎಳ್ಳುಗದ್ದೆ, ಸಮಿತಿ ಹಿರಿಯ ಸದಸ್ಯರಾದ ದೇಜಪ್ಪ ಗೌಡ ಅರಣೆಮಾರು, ಕ್ಷೇತ್ರದ ಅರ್ಚಕರಾದ ಸಂಪತ್ ಕುಮಾರ್, ಸಮಿತಿ ಸದಸ್ಯರಾದ ಶ್ರೀನಿವಾಸ್ ಗೌಡ ಗಣಪನಗುತ್ತು, ಸುಂದರ ಎಂ. ಕೆ , ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸಂಚಾಲಕರಾದ ಆರತಿ ರುಕ್ಮಯ್ಯ ಗೌಡ ಏರ್ದೊಟ್ಟು, ಅನಂತಪದ್ಮನಾಭ ಮಹಿಳಾ ಸಮಿತಿಯ ಅಧ್ಯಕ್ಷರಾದ ಹೇಮಲತಾ ಶ್ರೀನಿವಾಸ್ ಗೌಡ ಗಣಪನಗುತ್ತು, ಗೌರವಾಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ, ನಿಕಟಪೂರ್ವ ಸಂಚಾಲಕಿಯಾದ ಶಾಲಿನಿ ಶಶಿಧರ್ ಗೊಲ್ಲ, ಕುಣಿತ ಭಜನಾ ತಂಡದ ಸಂಚಾಲಕಿ ಸ್ವಾತಿ ದಿನೇಶ್ ಮರ್ವದಡಿ, ಶ್ರೀ ಅನಂತೇಶ್ವರ ಭಜನ ಮಂಡಳಿಯ ಅಧ್ಯಕ್ಷ ಹರೀಶ್ ಪೋಸೋಟ್ಟು, ಪದಾಧಿಕಾರಿಗಳು ಉಪಸ್ಥಿತರಿದ್ದರು.