ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಇತ್ತೀಚಿನ ದಿನಗಳಲ್ಲಿ ತೀವ್ರ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮಂಡಳಿಯ ಕಾರ್ಮಿಕರಿಗೆ ಸರಿಯಾದ ಯೋಜನಾ ಪ್ರಯೋಜನಗಳ ಲಭಿಸುವಿಕೆಯ ಕೊರತೆ, ನೋಂದಣಿ ಸಮಸ್ಯೆ, ಹಾಗೂ ಪರಿಹಾರ ಸೌಲಭ್ಯಗಳ ವಿಳಂಬ ಇತ್ಯಾದಿ ಅಂಶಗಳಿಂದ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಈ ಬಗ್ಗೆ ಕನ್ನಡ ಜಿಲ್ಲೆಯ ಕಾರ್ಮಿಕ ಆಯುಕ್ತರವರಿಗೆ ಭಾರತೀಯ ಮಜ್ದೂರು ಸಂಘ – ದಕ್ಷಿಣ ಕನ್ನಡ ಘಟಕದ ನಿಯೋಗದ ಮೂಲಕ ಮನವಿ ಸಲ್ಲಿಸಲಾಯಿತು. ಈ ನಿಯೋಗವನ್ನು ಜಿಲ್ಲಾಧ್ಯಕ್ಷರಾದ ವಕೀಲರು, ಅನಿಲ್ ಕುಮಾರ್ ಬೆಳ್ತಂಗಡಿ ಅವರು ನೇತೃತ್ವ ವಹಿಸಿದ್ದರು.
ಮನವಿಯಲ್ಲಿ ಹಾಕಲಾದ ಪ್ರಮುಖ ಬೇಡಿಕೆಗಳು:
- ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಬೇಕು.
- ಲೇಬರ್ ಮಂಡಳಿಯಿಂದ ದೊರೆಯಬೇಕಾದ ಸೌಲಭ್ಯಗಳನ್ನು ಸ್ಪಷ್ಟವಾಗಿ ಹಾಗೂ ವೇಗವಾಗಿ ಕಾರ್ಮಿಕರಿಗೆ ತಲುಪಿಸಬೇಕು.
- ಕಾರ್ಮಿಕ ನೋಂದಣಿಗೆ ಸಂಬಂಧಿಸಿದಂತೆ ಸುಲಭ ಪ್ರಕ್ರಿಯೆ ರೂಪಿಸಬೇಕು.
- ಜಿಲ್ಲೆಯಲ್ಲಿ ಬಡ ಕಾರ್ಮಿಕರಿಗೆ ಆರೋಗ್ಯ, ಶಿಕ್ಷಣ ಮತ್ತು ವಸತಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮುಖ್ಯತೆ ನೀಡಬೇಕು.
- ಹಳೆ ಫಲಾನುಭವಿಗಳಿಗೆ ಬಾಕಿಯಿರುವ ಧನ ಸಹಾಯ, ಪಿಂಚಣಿ ಮತ್ತು ವೈದ್ಯಕೀಯ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು.
- ಜಿಲ್ಲಾ ಕಾರ್ಮಿಕ ಆಯುಕ್ತರವರು ಈ ಮನವಿಗೆ ಗಂಭೀರವಾಗಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದು ಸಾಂತ್ವನದ ವಿಷಯ.
ಭಾರತೀಯ ಮಜ್ದೂರು ಸಂಘ ಈ ಮೂಲಕ ಎಲ್ಲಾ ಕಾರ್ಮಿಕರ ಹಕ್ಕುಗಳಿಗಾಗಿ ಸದಾ ಹೋರಾಡಲು ಬದ್ಧವಾಗಿದೆ.
ಸಂಘಟನೆಯ ಪ್ರಮುಖರು ಬಿ.ಎಂ.ಎಸ್. ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಕೋಶಾಧಿಕಾರಿ ಉದಯ ಕುಮಾರ್, ಸಂಘಟನಾ ಕಾರ್ಯದರ್ಶಿ (ಕಟ್ಟಡ ವಿಭಾಗ) ಕುಮಾರ್ ನಾಥ್, ಜಿಲ್ಲಾ ಉಪಾಧ್ಯಕ್ಷ (ಮೋಟಾರ್ ವಿಭಾಗ) ನಾರಾಯಣ ಪೂಜಾರಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಉದಯ ಬಿ.ಕೆ., ಸುಳ್ಯ ತಾಲೂಕು ಅಧ್ಯಕ್ಷ ಮದುಸೂಧನ್, ಕಡಬ ತಾಲೂಕು ಅಧ್ಯಕ್ಷ ಚಂದ್ರ ಶೇಖರ, ಪುತ್ತೂರು ತಾಲೂಕು ಅಧ್ಯಕ್ಷ ಪುರಂದರ ರೈ, ಮೂಡಬಿದ್ರೆ ತಾಲೂಕು ಅಧ್ಯಕ್ಷ ರಾಜೇಶ್ ಸುವರ್ಣ ಮತ್ತು ಇತರ ಪ್ರಮುಖರು ಭಾಗವಹಿಸಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಅನಿಲ್ ಕುಮಾರ್ ಬೆಳ್ತಂಗಡಿ 9481960686