ಮಿತ್ತಬಾಗಿಲು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ ಮಿತ್ತಬಾಗಿಲು ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಕಾರ್ಯಕ್ರಮ ಗ್ರಾ.ಪಂ. ಸಭಾಂಗಣದಲ್ಲಿ ಜು.15ರಂದು ಮಧ್ಯಾಹ್ನ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿಯೇ ಒಂದು ಉತ್ತಮವಾದ ಕಾರ್ಯಕ್ರಮ ಪಂಚಾಯತ್ ನಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿರುವುದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಎಂದರು.

ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ರೋಡಿನಲ್ಲಿ ಹೋಗುತ್ತಿದೆ, ಇದರಿಂದ ಕೃಷಿಗೆ ತೊಂದರೆ ಉಂಟಾಗುತ್ತಿದೆ, ಪಂಚಾಯತ್ ನಲ್ಲಿ ಕೇಳಿದರೆ ಜಿಲ್ಲಾ ಪಂಚಾಯತ್ ಸಂಬಂಧಿಸಿದ ರಸ್ತೆ ಹೇಳುತ್ತಾರೆ ಎಂದಾಗ, ಉತ್ತರಿಸಿದ ಶಾಸಕರು ಸರ್ಕಾರದಿಂದ ಅನುದಾನಗಳು ಬರುತ್ತಿಲ್ಲ, ಅದರಿಂದ ಜನರಿಗೆ ಇಂತಹ ಸಮಸ್ಯೆಗಳು ಉಂಟಾಗಿದೆ ಎಂದರು.

ಈ ವೇಳೆ ಉಪ ತಹಶೀಲ್ದಾರ್ ಜಯ, ನೋಡಲ್ ಅಧಿಕಾರಿಯಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸ್ವಾಗತಿಸಿದರು. ಮಿತ್ತಬಾಗಿಲು ಗ್ರಾ.ಪಂ.ಅಧ್ಯಕ್ಷ ವಿನಯಚಂದ್ರ, ಉಪಾಧ್ಯಕ್ಷೆ ವಿಜಯ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಗ್ರಾ.ಪಂ. ಸದಸ್ಯರು, ಸಂಘದ ನಿರ್ದೇಶಕರು, ಗ್ರಾಮ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಶಾಸಕರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.