ಕಳೆಂಜ: ದೇವರಮಾರ್ ಚಂಪಾವತಿ ಅವರ ಗದ್ದೆಯಲ್ಲಿ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ನೇತೃತ್ವದಲ್ಲಿ ಬ್ರಹತ್ ನೇಜಿ ನಾಟಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಗ್ರಾಮದ ಹಿರಿಯ ಮುಖಂಡರಾದ ಬಲ್ಕಾಜೆ ಲಕ್ಷ್ಮಣ ಗೌಡ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನೇಜಿ ನಾಟಿ ಮಾಡಲಾಯಿತು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಶ್ರೀಧರ್ ರಾವ್ ಕಾಯಡ, ದೇವಸ್ಥಾನದ ಅರ್ಚಕ ರಾಮಕೃಷ್ಣ ಭಟ್, ಶಾಲೆತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ರಾವ್ ಕಾಯಡ, ಜೆಸಿಐ ಕಪಿಲಾ ಕೊಕ್ಕಡ ಇದರ ಅಧ್ಯಕ್ಷೆ ಡಾ. ಶೋಭಾ ಜೈನ್, ಸಂತೋಷ್ ಜೈನ್ ವಲಂಬಳ, ಜೋಸೆಫ್ ಪಿರೇರೊ, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಕುಸುಮಾಕರ ಕೊತ್ತೋಡಿ, ಖಜಾಂಚಿ ನಿರಂಜನ ಬದಿಮಾರು, ಕೇಶವ ಗೌಡ ಮಲ್ಲಜಾಲ್, ಬಾಲಕೃಷ್ಣ ಗೌಡ ಬರಮೇಲು, ಉಮೇಶ್ ರೈ ಪಂಚಮಿಪಾದೆ, ಶೀನಪ್ಪ ಗೌಡ ಕೊತ್ತೋಡಿ, ಗಣೇಶ್ ಬದಿಮಾರ್, ರಾಘಚಂದ್ರ ಪೂಜಾರಿ, ವಸಂತ ಪೂಜಾರಿ, ಸುಜಾತ ಶೆಟ್ಟಿ, ಕಂಬಳ ಕೋಣ ಮಾಲಕ ಹರಿಪ್ರಸಾದ್ ಶೆಟ್ಟಿ ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಮತ್ತು ಊರ ಭಕ್ತರು ಉಪಸ್ಥಿತರಿದ್ದರು. ಒಟ್ಟು 85 ಜನರು ನೇಜಿ ನಾಟಿ ಕೆಲಸದಲ್ಲಿ ಪಾಲ್ಗೊಂಡಿದ್ದರು.