ಮಡಂತ್ಯಾರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ಸಾಧಕ ರೈತರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಸ್ತಾಂತರ ಜು.13ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ
ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್ಸ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ಜರಗಿತು.
ಸಂಘವು ಆರ್ಥಿಕ ವರ್ಷಾಂತ್ಯದಲ್ಲಿ ರೂ. 455.79 ಕೋಟಿ ಉತ್ತಮ ವ್ಯವಹಾರ ನಡೆಸಿ, ಶೇ. 97 ಸಾಲ ವಸೂಲಾತಿಯನ್ನು ಮಾಡಿ ರೂ. 1,62,55,756.84 ಲಾಭ ಗಳಿಸಿದೆ. ಸದಸ್ಯರರಿಗೆ ಶೇ 15%ಘೋಸಿಸಿದರು. ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್ಸ, ಉಪಾಧ್ಯಕ್ಷ ಕಾಂತಪ್ಪ ಗೌಡ, ನಿರ್ದೇಶಕರಾಗಿ ಕೆ.ಅರವಿಂದ ಜೈನ್, ಧನಲಕ್ಷ್ಮೀ, ಅಮಿತಾ ಪ್ರಿಯಾ ಲೋಬೋ, ಸುರೇಶ್ ಎಸ್., ಕುಮಾರ ನಾಯ್ಕ, ಮಹಾಬಲ ಕೆ., ಗಣೇಶ್ ಮೂಲ್ಯ, ಗೋಪಾಲಕೃಷ್ಣ ಕೆ., ಕಿಶೋರ್ ಕುಮಾರ್ ಶೆಟ್ಟಿ, ಬಿ. ಪದ್ಮನಾಭ ಸಾಲಿಯಾನ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೋಕಿಂ ಡಿಸೋಜ ವರದಿ ಮಂಡಿಸಿದರು.
ಕೃಷಿಕರಿಗೆ ಸನ್ಮಾನ: ಮಡಂತ್ಯಾರು ಸಹಕಾರಿ ಸಂಘದ ಕಾರ್ಯ ವ್ಯಾಪ್ತಿಯ ಕೃಷಿಕರಿಗೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಅತೀ ಹೆಚ್ಚು ಭತ್ತದ ಕೃಷಿ, ಹೆಚ್ಚು ಹಾಲು ಉತ್ಪಾದಿಸುವ ರೈತರಿಗೆ ಜೇನು ಕೃಷಿ ಮಾಡುವ ರೈತ, ತರಕಾರಿ ಬೆಳೆಯುವ ರೈತನಿಗೆ ಪ್ರಶಸ್ತಿ ಮತ್ತು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ: ಸಂಘದ ಸದಸ್ಯರ ಮಕ್ಕಳು 2024-25ನೇ ಸಾಲಿನಲ್ಲಿ ಎಸೆಸೆಲ್ಸಿ, ದ್ವಿತೀಯ ಪಿಯುಸಿ/ತತ್ಸಮಾನ ತಾಂತ್ರಿಕ ಪರೀಕ್ಷೆಯಲ್ಲಿ ಶೇ.90, 2024-25ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ.80, ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶ್ರೇಣಿ (RANK), CET/JEENEET CET ಪರೀಕ್ಷೆಯಲ್ಲಿ ಶ್ರೇಣಿ (RANK) ಪಡೆದ ಮತ್ತು ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದ/ ಆಯ್ಕೆಯಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿ ವೇತನ: ಸದಸ್ಯರ ಮಕ್ಕಳು 2024-25 ನೇ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಾಗೂ ದ್ವಿತೀಯ ಪಿಯುಸಿ / ತತ್ಸಮಾನ ತಾಂತ್ರಿಕ ಪರೀಕ್ಷೆಯಲ್ಲಿ ಶೇ.95 ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ.85 ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ CET/JEE/NEET ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ಸಂಘವು 2024-25ನೇ ಆರ್ಥಿಕ ವರ್ಷದಲ್ಲಿ ಉತ್ತಮ ವ್ಯವಹಾರ ನಡೆಸಿ ಅತ್ಯುತ್ತಮ ಲಾಭಗಳಿಸಿದೆ ಮತ್ತು ಲೆಕ್ಕಪರಿಶೋಧನೆಯಲ್ಲಿ ಸಂಘವನ್ನು ‘ಎ’ ವರ್ಗಕ್ಕೆ ವರ್ಗಿಕರಿಸಲಾಗಿದೆ, 2024-25ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ‘ಎ’ ವರ್ಗದಲ್ಲಿ 5345, ‘ಸಿ’ ವರ್ಗದಲ್ಲಿ 7389 ಮತ್ತು ‘ಡಿ’ ವರ್ಗದಲ್ಲಿ 239 ಒಟ್ಟು 12,923ಸದಸ್ಯರನ್ನು ಹೊಂದಿದ್ದು. ರೂ 125.59 ದುಡಿಯುವ ಬಂಡವಾಳ ಹೊಂದಿರುತ್ತದೆ. ಆರ್ಥಿಕ ವರ್ಷದಲ್ಲಿ ರೂ.455.79 ಕೋಟಿ ವ್ಯವಹಾರ ನಡೆಸಿ ವರ್ಷಾಂತ್ಯಕ್ಕೆ ಶೇ.97 ಸಾಲ ವಸೂಲಾತಿಯನ್ನು ಮಾಡಿ ರೂ 1,62,55,756.84 ಲಾಭಗಳಿಸಿದೆ. 23ಸದಸ್ಯರಿಗೆ ರೂ.1.82ಲಕ್ಷ ಆರ್ಥಿಕ ಧನಸಹಾಯ ನೀಡಲಾಗಿದೆ. ಸಹಕಾರಿಗಳು ಕೂಲಿ ಕಾರ್ಮಿಕರು ಆಗಿರುವುದರಿಂದ ಒಂದು ದಿನ ಕೆಲಸಕ್ಕೆ ರಜಾ ಮಾಡಬೇಕಾಗಿರುವುದರಿಂದ ಪಡಿತರ ಬೆಳಿಗ್ಗೆ 9ರಿಂದ ರಾತ್ರಿ 8ರ ವರೆಗೆ ನೀಡಲು ಸಂಘದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ್ದು ಇದು ವಿತರಿಸಿ ಅತೀ ಕಡಿಮೆ ಅವಧಿ ಯಲ್ಲಿ ವಿತರಿಸಿದ ತಾಲೂಕಿನ ಪ್ರಥಮ ಸಹಕಾರಿ ಎನಿಸಿಕೊಂಡಿದೆ. ಈ ಯೋಜನೆ ಮುಂದುವರಿಸಲು ಮಹಾ ಸಭೆಯಲ್ಲಿ ಸರ್ವನಾನು ಮತದಿಂದ ನಿರ್ಣಯಿಸಲಾಗಿದೆ.
ಈ ಸಾಧನೆಗೆ ಬೆನ್ನೆಲುಬಾಗಿರುವ ಸಂಘದ ಸದಸ್ಯರು, ಪ್ರಾಮಾಣಿಕ ಸಿಬ್ಬಂದಿಗಳು, ಅತ್ಯುತ್ತಮ ಆಡಳಿತ ಮಂಡಳಿ ಮತ್ತು ಹಿತೈಷಿಗಳ ಆಶೀರ್ವಾದಗಳಿಂದ ಈ ಯಶಸ್ಸನ್ನು ಗಳಿಸಲು ಸಾಧ್ಯವಾಯಿತು. ಈ ಸಾಧನೆಯಲ್ಲಿ ದೊರೆತ ಯಶಸ್ಸನ್ನು ಸಂಘದ ಎಲ್ಲಾ ಸದಸ್ಯರುಗಳಿಗೆ ಅರ್ಪಿಸುತ್ತೇನೆ ಎಂದು ಮಡಂತ್ಯಾರು ಸಿಎ ಬ್ಯಾಂಕಿನ ಅಧ್ಯಕ್ಷ ಜೋಯೆಲ್ ಮೆಂಡೋನ್ಸ ತಿಳಿಸಿದರು.ಉಪಾಧ್ಯಕ್ಷ ಕಾಂತಪ್ಪ ಗೌಡ ಸ್ವಾಗತಿಸಿದರು.