ಮಡಂತ್ಯಾರು: ಪ್ರಾ.ಕೃ.ಪ.ಸ.ಸಂಘದ ನೇತೃತ್ವದಲ್ಲಿ ಬೃಹತ್ ಉಚಿತ ಆರೋಗ್ಯ, ಕ್ಯಾನ್ಸ‌ರ್ ತಪಾಸಣಾ ಶಿಬಿರ: ನಾವೆಲ್ಲ ಸಾವಯವ ಕೃಷಿ ಉತ್ಪನ್ನಗಳನ್ನು ಬಳಸಿ ಆರೋಗ್ಯ ಸಂರಕ್ಷಣೆ ಮಾಡುವ: ಹರೀಶ್ ಪೂಂಜ

0

ಮಡಂತ್ಯಾರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ, ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ಫಾ। ಎಲ್.ಎಂ. ಪಿಂಟೋ ಆಸ್ಪತ್ರೆ, ಬದ್ಯಾರು ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೂತ್ ರೆಡ್ ಕ್ರಾಸ್ ಇವರ ಸಹಯೋಗದೊಂದಿಗೆ ಜು.13ರಂದು ಬೃಹತ್ ಉಚಿತ ಆರೋಗ್ಯ ಹಾಗೂ ಮಹಿಳೆಯರ ಕ್ಯಾನ್ಸರ್ ತಪಾಸಣಾ ಶಿಬಿರವು ನಡೆಯಿತು.

ಶಾಸಕ ಹರೀಶ್ ಪೂಂಜ ಶಿಬಿರ ಉದ್ಘಾಟನೆ ನೆರವೇರಿಸಿದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ಫಾ. ಸ್ಟಾನಿ ಗೋವಿಯಸ್ ಆಶೀರ್ವಾಚನ ನೀಡಿದರು. ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಸಾಮಾಜಿಕ ಜಾಲತಾಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಭಾಗವಹಿಸಿದ್ದರು.ಬದ್ಯಾರ್ ಎಲ್. ಎಂ. ಪಿಂಟೋ ಆಸ್ಪತ್ರೆಯ ಸಿ. ಜಾನೆಟ್ ರೇಗೋ, ಫಾ. ಮುಲ್ಲರ್ ಆಸ್ಪತ್ರೆಯ ವೈದ್ಯಧಿಕಾರಿ ಡಾ. ವಿಲ್ಬರ್, ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥ ರಂಜನ್, ಸೇಕ್ರೆಡ್ ಹಾರ್ಟ್ ಕಾಲೇಜು ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೆರಾ, ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್, ಉಪಾಧ್ಯಕ್ಷ ಕಾಂತಪ್ಪ ಗೌಡ, ನಿರ್ದೇಶಕರಾಗಿ ಶ್ರೀಮತಿ ಧನಲಕ್ಷ್ಮೀ, ಶ್ರೀಮತಿ ಅಮಿತಾ ಪ್ರಿಯಾ ಲೋಬೋ, ಸುರೇಶ್ ಎಸ್, ಮಹಾಬಲ ಕೆ., ಗಣೇಶ್ ಮೂಲ್ಯ, ಗೋಪಾಲಕೃಷ್ಣ ಕೆ, ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್,
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೋಕಿಂ ಡಿಸೋಜ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೆನ್ಸಿ ಪಿಂಟೊ, ಪ್ರಶಾಂತ್ ಪಾರೆಂಕಿ, ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ, ಸದಸ್ಯರು ಹರೀಶ್ ಶೆಟ್ಟಿ, ಶೈಲೇಶ್ ಕುಮಾರ್, ರತ್ನಾಕರ ಶೆಟ್ಟಿ ಮೂಡಯೂರು, ರೋನಾಲ್ಡ್ ಸಿಕ್ವೆರಾ,ದಯಾನಂದ,ಪ್ರಶಾಂತ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

ಅಧ್ಯಕ್ಷ ಜೊಯೇಲ್ ಮೆಂಡೋನ್ಸ ಸ್ವಾಗತಿಸಿದರು. ಫ್ರಾನ್ಸಿಸ್ ವಿ. ವಿ. ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಕಾಂತಪ್ಪ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here