ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

0

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಜು. 12ರಂದು ಕಾಲೇಜಿನ ಸಭಾಭವನದಲ್ಲಿ ನಡೆಯಿತು. ಪಿ. ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಸುಧಾನ ಪಿ. ಯು. ಕಾಲೇಜ್ ಪುತ್ತೂರು ಇದರ ಪ್ರಾಂಶುಪಾಲ ಸುಪ್ರೀತ್ ಕೆ.ಸಿ. ನೆರವೇರಿಸಿ ವಿದ್ಯಾರ್ಥಿಗಳಿಗೆ ಹೇಗೆ ಜವಾಬ್ದಾರಿಗಳ ನಿರ್ವಹಣೆ ಕುರಿತು ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿ ಗಳಾಗಿ ವಾಣಿ ಶಿಕ್ಷಣ ಸಂಸ್ಥೆಗಳ ಗೌರವಧ್ಯಕ್ಷ ಹೆಚ್ ಪದ್ಮ ಗೌಡ, ಸಂಘದ ಪ್ರದಾನ ಕಾರ್ಯದರ್ಶಿ ಗಣೇಶ್ ಗೌಡ, ಜೊತೆ ಕಾರ್ಯದರ್ಶಿ ಶ್ರೀನಾಥ ಕೆ.ಎಂ. ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ., ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಗುರು ಲಕ್ಷ್ಮೀನಾರಾಯಣ, ಕಾಲೇಜಿನ ಆಡಳಿತಧಿಕಾರಿ ಪ್ರಸಾದ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುರೇಂದ್ರ ವಿದ್ಯಾರ್ಥಿ ಸಂಘದ ಪರಿಚಯ ನಡೆಸಿಕೊಟ್ಟರು. ಪ್ರಮಾಣ ವಚನವನ್ನು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೌಮ್ಯ ಬಿ. ಭೋಧಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಅಧ್ಯಕ್ಷರಾಗಿ ಗುರುಪ್ರಸಾದ್, ಉಪಾಧ್ಯಕ್ಷೆ ಶ್ರೀಜನಿ, ಉಪಾಧ್ಯಕ್ಷ ಸುಬಿನ್ ಸ್ಯಾಂಡಿ, ಕಾರ್ಯದರ್ಶಿ ನಿಶ್ಮಿತಾ, ಸಾಂಸ್ಕೃತಿಕ ಸಂಯೋಜಕಿ ವೀಕ್ಷಾ, ಸಾಂಸ್ಕೃತಿಕ ಸಂಯೋಜಕ ಧನುಷ್, ಮಹಿಳಾ ಕಲ್ಯಾಣ ಸಂಯೋಜಕರಾದ ಶ್ರೀಶ, ಸಮೀಕ್ಷಾ, ಕ್ಲೀನ್ ಕ್ಯಾಂಪಸ್ ಸಂಯೋಜಕರಾದ ಮೋಹಿತ್ ಮತ್ತು ಶ್ರದ್ಧಾ, ಕ್ರೀಡಾ ಸಂಯೋಜಕರಾದ ಉಲ್ಲಾಸ್ ಮತ್ತು ಸಂಜು, ಎನ್.ಎನ್.ಎಸ್. ನಾಯಕ ತೀರ್ಥಶ್, ನಾಯಕಿ ಸುಶ್ಮಿತಾ, ರೋವರ್ಸ್ ಘಟಕದ ನಾಯಕ ಸುಭಾಷ್, ನಾಯಕಿ ಮೌಲ್ಯ ಕೆ.ಎಸ್., ರೆಡ್ ಕ್ರಾಸ್ ನಾಯಕ ಆದಿತ್ಯ ರಾಜ್ ಮತ್ತು ತರಗತಿ ಪ್ರತಿನಿಧಿಗಳಾಗಿ ಅಮೃತ್( ಪ್ರಥಮ ಕಲಾ), ಸೂರ್ಯ (ಪ್ರಥಮ ವಾಣಿಜ್ಯ ಎ.), ಯಶ್ವಿತ್ ಕೆ.(ಪ್ರಥಮ ವಾಣಿಜ್ಯ ಬಿ.), ಮೋಹಿತ್ ಡಿ ಗೌಡ (ಪ್ರಥಮ ವಾಣಿಜ್ಯ ಸಿ.), ತನ್ವಿ( ಪ್ರಥಮ ವಾಣಿಜ್ಯ ಡಿ.), ಅನುಷ್ ಆರ್.(ಪ್ರಥಮ ವಾಣಿಜ್ಯ ಈ.), ಅಶಿತೋಷ್( ಪ್ರಥಮ ವಿಜ್ಞಾನ ಐ. ಜಿ.) ಅನಿಷಾ ಮಸ್ಕ್ಯಾರೆನ್ಹಸ್(ಪ್ರಥಮ ವಿಜ್ಞಾನ ಎ.), ಸ್ಮರಣ್( ಪ್ರಥಮ ವಿಜ್ಞಾನ ಬಿ.), ರಿತೇಶ್( ಪ್ರಥಮ ವಿಜ್ಞಾನ ಸಿ.), ಯಶವಂತ್ (ಪ್ರಥಮ ವಿಜ್ಞಾನ ಡಿ.), ಭವಿತ್ ಎಚ್. ಎಸ್.(ದ್ವಿತೀಯ ಕಲಾ ವಿಭಾಗ), ದಿಯಾ ಚಂದನ್ ಕೆ. (ದ್ವಿತೀಯ ವಾಣಿಜ್ಯ ಎ.), ಎ. ಧೀರಜ್ ಕುಮಾರ್( ದ್ವಿತೀಯ ವಾಣಿಜ್ಯ ಬಿ.), ಲಕ್ಷ್ಮಿಕಾಂತ( ದ್ವಿತೀಯ ವಾಣಿಜ್ಯ ಸಿ.), ಶ್ರೀಹರ್ಷ( ದ್ವಿತೀಯ ವಾಣಿಜ್ಯ ಡಿ.), ಸ್ಪಂದನ್( ದ್ವಿತೀಯ ವಿಜ್ಞಾನ ಐ.ಜಿ.), ಕೃತಿ( ದ್ವಿತೀಯ ವಿಜ್ಞಾನ ಎ.),ಕೃತಿಕ ವಿ.(ದ್ವಿತೀಯ ವಿಜ್ಞಾನ ಬಿ.), ಪ್ರಣಮ್(ದ್ವಿತೀಯ ವಿಜ್ಞಾನ ಸಿ.) ಆಯ್ಕೆಯಾಗಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿನಯ ಭಿಡೆ ನಿರೂಪಿಸಿದರು. ವಾಣಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ ಸಭೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ಗುರುಪ್ರಸಾದ್ ವಂದಿಸಿದರು.





LEAVE A REPLY

Please enter your comment!
Please enter your name here