ಬೆಳಾಲು: ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ 2025-26ನೇ ಸಾಲಿನ ಶಿಕ್ಷಕ ರಕ್ಷಕ ಸಂಘವನ್ನು ಜು.9ರಂದು ರಚಿಸಲಾಯಿತು. ಅಧ್ಯಕ್ಷರಾಗಿ ರಾಜೇಶ್ ಕುರ್ಕಿಲ್, ಉಪಾಧ್ಯಕ್ಷರಾಗಿ ಉಷಾ ಖಜಾಂಚಿಯಾಗಿ ಯಶೋಧರ ಸದಸ್ಯರಾಗಿ ವಸಂತಿ, ವಿಜಯಲಕ್ಷ್ಮಿ, ಅರುಣಾಕ್ಷಿ, ಸುಂದರ ಮತ್ತು ಲಕ್ಷ್ಮಣ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಮತ್ತು ಜೊತೆ ಕಾರ್ಯದರ್ಶಿ ಕೋಕಿಲ ಕಾರ್ಯನಿರ್ವಹಿಸುವರು.
ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಶಾಲೆಯಲ್ಲಿರುವ ಸೌಲಭ್ಯಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳ ಕುರಿತು ಪೋಷಕರಿಗೆ ಮಾಹಿತಿ ನೀಡುವುದರೊಂದಿಗೆ ಸಂಸ್ಕಾರಯುತ, ಶಿಸ್ತುಭರಿತ ಶಿಕ್ಷಣವನ್ನ ಪಡೆದಾಗ ವಿದ್ಯಾರ್ಥಿಗಳ ಭವಿಷ್ಯ ಸುಂದರವಾಗುವುದು ಅದರಲ್ಲಿ ಅವರ ಪಾತ್ರ ಅತಿ ಮುಖ್ಯವಾದದ್ದು ಎಂದು ತಿಳಿ ಹೇಳಿದರು.
ಶಿಕ್ಷಕ ರಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷೆ ಭವಾನಿ ಮಾರ್ಪಾಲು ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ರವಿಚಂದ್ರ ಜೈನ್ ಕಾರ್ಯಕ್ರಮವನ್ನು ಸಂಘಟಿಸಿದರು.
ಶಿಕ್ಷಕರಾದ ಗಣೇಶ್ವರ್ ಸ್ವಾಗತಿಸಿ, ಸುಮನ್ ಯು.ಎಸ್. ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಾನಂದ ವಂದಿಸಿದರು.