ಬೆಳಾಲು: ಜಿಲ್ಲಾ ರೈತ ತರಬೇತಿ ಕೇಂದ್ರ ಬೆಳ್ತಂಗಡಿ, ನಾಂಗಬಿಕ ಸಂಜೀವಿನಿ ಒಕ್ಕೂಟ ಬೆಳಾಲು ಇವರ ಸಂಯುಕ್ತ ಆಶ್ರಯದಲ್ಲಿ ಜು. 10ರಂದು ಸುಲೈಮಾನ್ ಭೀಮಂಡೆ ಇವರ ಭತ್ತದ ಗದ್ದೆಯಲ್ಲಿ ” ಯಾಂತ್ರಿಕೃತ ನೇಜಿ ನಾಟಿ ಮಾಹಿತಿ ಮತ್ತು ಪ್ರಾತ್ಯಕ್ಷಿತೆ ” ಕಾರ್ಯಕ್ರಮ ನಡೆಯಿತು.

ಸುಲೈಮಾನ್ ಭೀಮಂಡೆ ಯಾಂತ್ರಿಕೃತ ನೇಜಿ ನಾಟಿಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಗಣೇಶ್ ಆಡಿಗ ಭತ್ತ ಕೃಷಿಯ ಮಹತ್ವದ ಬಗ್ಗೆ ಹಾಗೂ ಇಲಾಖೆಯ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಜಯರಾಮ್ ಮಯ್ಯ, ಕೊಕ್ಕಡ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ಸಹಾಯಕ ಅಧಿಕಾರಿ ಸಾಯಿನಾಥ್, ನಾಂಗಬಿಕ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿ ವರ್ಗದವರು, ಆಸಕ್ತ ರೈತರು, ಬೆಳಾಲು ಪ್ರೌಢ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೃಷಿ ಸಖಿ ಸ್ವಾತಿ ಸ್ವಾಗತಿಸಿ, ವಂದಿಸಿದರು.