ಬೆಳ್ತಂಗಡಿ: ನಿರಂತರವಾಗಿ ಕಠಿಣ ಪರಿಶ್ರಮ ಇದ್ದರೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಪುತ್ತೂರಿನ ಯುವ ಉದ್ಯಮಿ ಸುಹಾಸ್ ಮರಿಕೆ ಹೇಳಿದರು. ಅವರು ವಾಣಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘದಿಂದ ನಡೆದ ‘ಲೀಡರ್ಸ್ ಟಾಕ್’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಉದ್ಯಮ ಎಂದರೆ ಒಂದು ತಪಸ್ಸು. ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಛಲದಿಂದ ಸಾಗಿದಾಗ ಅದರಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲಿನ ಬಗ್ಗೆ ಚಿಂತಿಸದೆ ಗೆಲುವಿನಡೆಗೆ ಧುಮುಕಲು ಪ್ರಯತ್ನಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಸಂಘದ ಸಂಯೋಜಕಿ ಪವಿತ್ರ ಮತ್ತು ಕುಮಾರಿ ಶ್ರಾವ್ಯ ಉಪಸ್ಥಿತರಿದ್ದರು.
ವಾಣಿಜ್ಯ ಸಂಘದ ನಾಯಕಿ ಸಿಂಚನ ಸಿ ಎಸ್ ಸ್ವಾಗತಿಸಿದರು. ದೀಪಕ್ ಧನ್ಯವಾದವಿತ್ತರು. ಶ್ರೀಜಾ ಕಾರ್ಯಕ್ರಮ ನಿರೂಪಿಸಿದರು.