ಬೆಳ್ತಂಗಡಿ: ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ಬೆಳ್ತಂಗಡಿ ಘಟಕದ 2ನೇ ಸಲಹಾ ಸಮಿತಿ ಸಭೆ ಜು.7ರಂದು ಸಂಘದ ಬೆಳ್ತಂಗಡಿ ಕಚೇರಿಯಲ್ಲಿ ನಡೆಯಿತು. ಸಂಘದ ಹಂಗಾಮಿ ಅಧ್ಯಕ್ಷ ಎ.ಯು.ಯೋಹಾನನ್, ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ ಫಡ್ಕೆ, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆಯ ಸಂಸ್ಥಾಪಕ ನಾಮ್ ದೇವ್ ರಾವ್, ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸಿ. ಕೆ. ಚಂದ್ರಕಲಾ, ಹಿರಿಯವರದಿಗಾರ ಅಶ್ರಫ್ ಆಲಿಕುಞ ಮುಂಡಾಜೆ, ನಿವೃತ್ತ ಶಿಕ್ಷಕ ಸುರೇಶ್ ಕುಮಾರ್, ಸಂಘದ ನಿರ್ದೇಶಕ ಪುರಂದರದಾಸ್ (ಕೆ.ಇ.ಬಿ. ಮೆಕ್ಯಾನಿಕ್ ದರ್ಜೆ 2, ಬೆಳ್ತಂಗಡಿ), ಜೇನು ಕೃಷಿಕ ಮೋಹನ್ ಕುಲಾಲ್ ಉಪಸ್ಥಿತರಿದ್ದರು. ವ್ಯವಸ್ಥಾಪಕ ಸಹನ್ ಸ್ವಾಗತಿಸಿದರು. ನಗದು ಗುಮಾಸ್ತೆ ಭವ್ಯ ಧನ್ಯವಾದವಿತ್ತರು.