ಧರ್ಮಸ್ಥಳ: ಪುದುವೆಟ್ಟು ಕ್ರಾಸ್ ಬಳಿ ಮರ ಮತ್ತು 2 ವಿದ್ಯುತ್ ಕಂಬ ರಸ್ತೆಗೆ ಉರುಳಿ ಬಿದ್ದ ಘಟನೆ ಜು.7ರಂದು ನಡೆದಿದೆ. ಪರಿಣಾಮ ವಾಹನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಧರ್ಮಸ್ಥಳ ವಿದ್ಯುತ್ ಇಲಾಖೆ ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಕಾರದಿಂದ ರಸ್ತೆ ಮೇಲೆ ಬಿದ್ದಿದ್ದ ಮರ ಮತ್ತು ವಿದ್ಯುತ್ ಕಂಬ ಗಳನ್ನು ತೆರವು ಮಾಡಲಾಯಿತು.

ಲೈಟ್ ಕಂಬಗಳ ಹೈ ಟೆನ್ಷನ್ ವೈರ್ ಗಳನ್ನು ವಿದ್ಯುತ್ ಇಲಾಖೆ ಸಿಬ್ಬಂದಿ ತುಂಡರಿಸಿ, ಸಾರ್ವಜನಿಕ ವಾಹನ ಓಡಾಟಕ್ಕೆ ಅನುವು ಮಾಡಿಕೊಟ್ಟರು.