ಬೆಳ್ತಂಗಡಿ: ಉಜಿರೆ ಸೇಂಟ್ ಜಾರ್ಜ್ ಚರ್ಚ್ ವಠಾರದಲ್ಲಿ ಸಂಡೇ ಸ್ಕೂಲ್ ವಾರ್ಷಿಕ ದಿನ ಮತ್ತು ಸೇಂಟ್ ಥೋಮಸರ ಹಬ್ಬವನ್ನು ಜು.6ರಂದು ಆಚರಿಸಲಾಯಿತು. ಕಳೆದ ವರ್ಷದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಮಕ್ಕಳ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪುತ್ತೂರು ಮೈನಸ್ ಸೆಮಿನರಿ ರೆಕ್ಟರ್ ಫಾ ರೊಬಿನ್ ಕೇಳoಪರಂಬಿಲ್, ಒ.ಸಿ.ಡಿ ಕರ್ಮಲಾ ಮಾತ ಆಶ್ರಮದ ಸುಪೀರಿಯರ್ ಫಾ ಜೋಸೆಫ್ ಇಲ್ಲಿಕ್ಕಲ್, ಉಜಿರೆ ಸೈಂಟ್ ಜಾರ್ಜ್ ಚರ್ಚಿನ ಧರ್ಮಗುರು ಬಿಜು ಮ್ಯಾಥ್ಯೂ ಅಂಬಟ್ ಬಲಿಪೂಜೆಯನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಸಂಡೇ ಸ್ಕೂಲ್ ಪಿ.ಟಿ.ಎ ಅಧ್ಯಕ್ಷ ನಿಜೋ ತುಂಡಿಪರಂಬಿಲ್, ಚರ್ಚಿನ ಪಾಲನಾ ಸಮಿತಿ ಸದಸ್ಯರಾಗಿರುವ ಸನ್ನಿ ಮನ್ನಿಯಕುನ್ನಲ್, ಜೋಸ್ ಪೇರುಕರೋಟ್, ಆಂಟನಿ ತೋಟಕಾಟ್, ಜೋಬಿ ಮುಳವನ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಂಡೇ ಸ್ಕೂಲ್ ಮುಖ್ಯೋಪಾಧ್ಯಾಯ ಥೋಮಸ್ ಪೂವತಿಂಗಲ್ ಧನ್ಯವಾದ ಸಮರ್ಪಿಸಿದರು.