ಶಿಶಿಲ: ಬಿ.ಜಯರಾಮ ನೆಲ್ಲಿತ್ತಾಯರ ಸಾಧನೆ ಪ್ರಶಂಶನೀಯ. ಕಳೆದ 41 ವರ್ಷದಲ್ಲಿ ಪೂಜ್ಯ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಸಮಾಜ ಸೇವೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ, ಭಜನೆ ಮುಂತಾದ ಕಾರ್ಯದಲ್ಲಿ ಅವರ ಕೆಲಸ ಕಾರ್ಯದಲ್ಲಿ ಪ್ರಾಮಾಣಿಕತೆಯನ್ನು ಮೆಚ್ಚಿದ್ದೇವೆ. ಸರಳ ಸಜ್ಜನರಾಗಿ ಸಮಾಜದಲ್ಲಿ ಬೆರೆತು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇನ್ನೂ ಅವರ ಸೇವೆ ಸಮಾಜದಲ್ಲಿ ಮುಂದುವರಿಯಲಿ. ಸದಾ ಕ್ರಿಯಾಶೀಲರಾಗಿರುವಂತೆ ದೇವರ ಅನುಗ್ರಹ ಇರಲಿ ಎಂದು ಪುಷ್ಪಗಿರಿ ಟೀಮ್ ವತಿಯಿಂದ ಹಿರಿಯ ಧಾರ್ಮಿಕ ಮುಖಂಡ ಶ್ರೀ ಕಿರಣ್ ಚಂದ್ರ ಪುಷ್ಪಗಿರಿ ನುಡಿದರು.
ಅವರು ಶಿಶಿಲ ಶಿವಕೀರ್ತಿ ನಿಲಯದಲ್ಲಿ ಜಯರಾಮ ನೆಲ್ಲಿತ್ತಾಯರಿಗೆ ಅಭಿನಂದಿಸಿ ಶುಭ ಹಾರೈಸಿದ್ದರು.
ಅವರೊಂದಿಗೆ ಪುಷ್ಪಗಿರಿ ಟೀಮ್ ಸದಸ್ಯರು, ಗ್ರಾಮದ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.