ಅರಸಿನಮಕ್ಕಿ: ಲತೇಶ್ ಯಕ್ಷಗಾನ ನಾಟ್ಯ ಕಲಾ ಕೇಂದ್ರದಿಂದ: ಕೃಷ್ಣಪ್ಪ ಕುಲಾಲ್ ರಿಗೆ ನುಡಿ ನಮನ

0

ಅರಸಿನಮಕ್ಕಿ: ಬಡತನ ಇದ್ದರು ಹೃದಯ ಶ್ರೀಮಂತಿಕೆಯಿಂದ ನಿಸ್ವಾರ್ಥದಿಂದ ನಮ್ಮ ಯಕ್ಷಗಾನ ಕೇಂದ್ರದಲ್ಲಿ ಹಾಗೂ ಇನ್ನಿತರ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜೀವಿಸಿದವರು ಅವರು ಅವರ ಆದರ್ಶಗಳನ್ನು ನಾವು ರೂಢಿಸಿಕೊಳ್ಳಬೇಕು ಎಂದು ಶ್ರೀ ಗೋಪಾಲ ಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನುಡಿನಮನ ಕಾರ್ಯಕ್ರಮದಲ್ಲಿ ಸಿ.ಎ. ಬ್ಯಾಂಕ್ ನಿರ್ದೇಶಕ ಧರ್ಮರಾಜ್ ಗೌಡ ಅಡ್ಕಾಡಿ ತಿಳಿಸಿದರು.

ತಾ. ಪಂ. ಮಾಜಿ ಸದಸ್ಯ ವಾಮನ್ ತಾಮನಕರ್ ಮಾತನಾಡಿ ಕೃಷ್ಣಪ್ಪ ಕುಲಾಲ್ ಶಿಸ್ತಿನ ಜೀವನ ನಡೆಸಿದವರು ತಮ್ಮಲ್ಲಿರುವ ಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ್ದಾರೆ ಓರ್ವ ಮಗಳನ್ನು ಗ್ರಾಮ ಲೆಕ್ಕಧಿಕಾರಿಯಾಗಿ ಮಾಡಿದ್ದು ಸುಖ ಸಂಸಾರಿಯಾಗಿದ್ದರು. ಬೂಡುಮುಗೇರು ದೇವಾಲಯದ ಕಾರ್ಯದರ್ಶಿಯಾಗಿ ಹಲವಾರು ವರ್ಷ ಕಾರ್ಯ ನಿರ್ವಹಿಸಿ ದೇವಳದ ಅಭಿವೃದ್ದಿಯಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ ಅವರು ಹಿರಿಯರಿಗಾಗಲಿ ಕಿರಿಯರಿಗಾಗಲಿ ಮಾರ್ಗದರ್ಶಕರಾಗಿದ್ದರು. ಅವರ ಒಳ್ಳೆಯ ಕೆಲಸಗಳನ್ನು ನಾವೆಲ್ಲರೂ ಮುಂದುವರೆಸಿಕೊಂಡು ಹೋಗುವ ಅವರ ಆತ್ಮ ವಿಷ್ಣು ದೇವರ ಪಾದ ಸೇರಲಿ ಎಂದು ಹೇಳಿ ದುಃಖಿತರಾದರು.

ಸಂಘದ ಸದಸ್ಯ ಪುರುಷೋತ್ತಮ್ ಶಿಶಿಲ ಹಾಗೂ ಕೇಂದ್ರದ ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.ಕಾರ್ಯಕ್ರಮದ ಸ್ವಾಗತ, ನಿರೂಪಣೆ, ಧನ್ಯವಾದವನ್ನು ಲತೇಶ್ ಯಕ್ಷಗಾನ ನಾಟ್ಯ ಕಲಾ ಕೇಂದ್ರದ ನಾಟ್ಯ ಗುರುಗಳಾದ ಸುಂದರ ಗೌಡ ಮುಳಿತ್ತಡ್ಕ ನೆರವೇರಿಸಿದರು.

LEAVE A REPLY

Please enter your comment!
Please enter your name here