ಕಣಿಯೂರು: ವಿಸ್ತ್ರತ ಹಾಲಿನ ಡೈರಿ ಉದ್ಘಾಟನೆ ಹಾಗೂ ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ ಕೋಡಿಯಲ್ ನಲ್ಲಿ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಚೈತ್ರ ಎಂ.ಜಿ. ಅವರ ಅಧ್ಯಕ್ಷತೆಯಲ್ಲಿ ಜೂ.25ರಂದು ಜರಗಿತು.
ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಪ್ರಭಾಕರ ಆರಂಬೋಡಿ ಅವರು ವಿಸ್ತ್ರತ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಸತೀಶ್ ರಾವ್ ಅವರು ಹೈನುಗಾರಿಕೆ ಮಾಹಿತಿ ನೀಡಿದರು. ಎಸ್.ಸಿ.ಡಿ.ಸಿ.ಸಿ. ಉಪ್ಪಿನಂಗಡಿ ಬ್ಯಾಂಕ್ ವ್ಯವಸ್ಥಾಪಕ ಸಂಧ್ಯಾ ಅವರು ಬ್ಯಾಂಕ್ ಸಾಲದ ಬಗ್ಗೆ ಮಾಹಿತಿ ನೀಡಿದರು.
ಸ್ಥಾಪಕಾಧ್ಯಕ್ಷ ರಾಜಶ್ರೀ ಎಸ್. ಹೆಗ್ಡೆ ಕಣಿಯೂರು ಪಂ. ಅಧ್ಯಕ್ಷ ಸೀತಾರಾಮ ಮಡಿವಾಳ, ಉಪಾಧ್ಯಕ್ಷೆ ಜಾನಕಿ, ಪಶುವೈದ್ಯ ಗಣಪತಿ ಬಿ.ಎಂ. ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ಸುದರ್ಶನ್ ಹೆಗ್ಡೆ ಕಣಿಯೂರು ಗುತ್ತು, ಮಾರುತಿ ಪುರ ಆಹಾರೋದ್ಯಮ ಶಿವಶಂಕರ್ ನಾಯಕ್ ಉಪಸ್ಥಿತರಿದ್ದು, ಮಾತನಾಡಿ ಶುಭ ಹಾರೈಸಿದರು. ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಹಾಗೂ ಕಾರ್ಯಕ್ರಮದ ರೂವಾರಿಗಳಾದ ಜೊಹರಾಬಿ ಅಬ್ದುಲ್ ಖಾದರ್ ಇಬ್ರಾಹಿಂ ಜಮೀಲ ಅವರನ್ನು ಸನ್ಮಾನಿಸಲಾಯಿತು. ನಂತರ ಎಲ್ಲಾ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಣಿಯೂರು ಶಾಲಾ ವಿದ್ಯಾರ್ಥಿಗಳಿಗ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಂಘದ ಅಧ್ಯಕ್ಷೆ ಚೈತ್ರ ಎಂ.ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸತೀಶ್ ವೇಣೂರು, ಸುಕುಮಾರ ಹಾಗೂ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಭಾರತಿ ಧನ್ಯವಾದ ಸಲ್ಲಿಸಿದರು.