ರೆಖ್ಯ: ಭಾರೀ ಗಾಳಿ ಮಳೆಯಿಂದಾಗಿ ರೆಖ್ಯ ಗ್ರಾಮದ ಕೋಲಾರು ನಿವಾಸಿ ಚರಂಬ ರವರ ಮನೆಯ ಮೇಲ್ಟಾವಣಿ ಮತ್ತು ಗೋಡೆ ಕುಸಿತಗೊಂಡ ಘಟನೆ ಜು.4ರಂದು ನಡೆದಿದೆ.
ಮನೆಯವರು ಕಳೆದ ಎರಡು ದಿನಗಳಿಂದ ಮನೆಯಲ್ಲಿ ವಾಸ್ತವ್ಯ ಇಲ್ಲದಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ಚರಂಬ ಅವರ ಮನೆಯವರು, ಮಗನ ಮನೆಯಲ್ಲಿ ವಾಸ್ತವ್ಯವಿರುತ್ತಾರೆ.