ಬೆಳ್ತಂಗಡಿ: ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮುರಳಿಕೃಷ್ಣ ಇರ್ವತ್ರಾಯ ಮಾತನಾಡಿ ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ತುರ್ತು ವೈದ್ಯಕೀಯ ಸೇವೆ ಅತ್ಯಗತ್ಯವಾಗಿದೆ. ನಮ್ಮ ಆಸ್ಪತ್ರೆಯು ಹೆಚ್ಚಿನ ಎಲ್ಲಾ ಸೌಲಭ್ಯಗಳೊಂದಿಗೆ ಗ್ರಾಮೀಣ ಪ್ರದೇಶದ ಜನರಿಗೆ ಸೇವೆಯನ್ನು ನೀಡುತ್ತಿದೆ. ನಮ್ಮ ಶ್ರೀ ಕೃಷ್ಣ ಯೋಗಕ್ಷೇಮ ಯೋಜನೆಯು ಯಾವುದೇ ಗುಡ್ಡಗಾಡು ಪ್ರದೇಶಗಳಿಗೆ ಹೋಗಿ ರೋಗಿಗಳಿಗೆ ಅಗತ್ಯ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ವಂದನಾ ಎಂ.ಇರ್ವತ್ರಾಯ, ವೈದ್ಯಾಧಿಕಾರಿ ಡಾ. ಆಲ್ಬೀನ್ ಜೋಸೆಫ್, ಡಾ.ಸ್ನೇಹಾ, ಕೆ.ಎಂ.ಸಿ ಎಮರ್ಜೆನ್ಸಿ ವಿಭಾಗದ ವೈದ್ಯಾಧಿಕಾರಿ ಡಾ.ಜೋಸೆಫ್, ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ಅಧಿಕಾರಿ ಜ್ಯೋತಿ ವಿ.ಸ್ವರೂಪ್, ಪಿ.ಆರ್.ಒ ಗಣೇಶ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮುಂಡಾಜೆಯ ಸೋಮಂತಡ್ಕದ ಡಾ.ಯು.ರವೀಂದ್ರನಾಥ್ ಪ್ರಭು ಅವರನ್ನು ಆಸ್ಪತ್ರೆ ವತಿಯಿಂದ ಗೌರವಿಸಲಾಯಿತು.