ಪೆರಿಂಜೆ ಸ. ಹಿ. ಪ್ರಾ. ಶಾಲೆಯಲ್ಲಿ ಪುಸ್ತಕ ವಿತರಣೆ

0

ಪೆರಿಂಜೆ: ಸಮಾಜದಲ್ಲಿರುವ ವಿದ್ಯಾಭಿಮಾನಿಗಳು, ದಾನಿಗಳಿಂದ ಸರಕಾರಿ ಶಾಲೆಗಳಿಗೆ ಪ್ರೋತ್ಸಾಹ, ಕೊಡುಗೆಗಳು ಸಿಗುವಂತಾಗಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸರಕಾರಿ ಪ್ರಾಥಮಿಕ ಶಾಲೆ ಪೆರಿಂಜೆ ಇಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತುಗಳನ್ನಾಡಿದರು. ದಿ. ಕೊರಗಪ್ಪ ಶೆಟ್ಟಿ, ದಿ. ಸಂಜೀವ ಶೆಟ್ಟಿ ಹಾಗೂ ದಿ.ವಿಠಲಶೆಟ್ಟಿ ಮದಕುಡೆ ಬರೋಡ ಇವರ ಸ್ಮರಣಾರ್ಥ ಮದಕುಡೆ ಕುಟುಂಬಸ್ಥರಾದ ಗಣೇಶ್ ಶೆಟ್ಟಿ, ಸತೀಶ್ ಶೆಟ್ಟಿ, ಶೈಲೇಶ್ ಶೆಟ್ಟಿ, ವಿಕಾಸ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಪ್ರೀತಿ ಶೆಟ್ಟಿ, ಪಿಂಕಿ ಹಾಗೂ ಮದಕ್ಕುಡೆ ಕುಟುಂಬಸ್ಥರ ಸಹಕಾರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಮದಕುಡೆ ಕುಟುಂಬಸ್ಥರಾದ ಅಮ್ಮಿ ಶೆಟ್ಟಿ, ಸುಮತಿ ಶೆಟ್ಟಿ, ದೀಕ್ಷಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶಾಂತ, ಶಿಕ್ಷಣ ಪ್ರೇಮಿಗಳಾದ ಆಲಿಯಬ್ಬ, ಶಾಲಾ ಎಸ್. ಡಿ. ಎಂ. ಸಿ ಯ ದಿನೇಶ್, ರಮ್ಯಾ, ಜಾನಮ್ಮ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಗುರು ನೀನಾ ಕುವೆಲ್ಲೊ ಸ್ವಾಗತಿಸಿ, ಶಿಕ್ಷಕರಾದ ವಿಶ್ವನಾಥ್ ಗೌಡ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ್ ನೆಲ್ಯಾಡಿ ಧನ್ಯವಾದಗೈದರು.

LEAVE A REPLY

Please enter your comment!
Please enter your name here