ಬೆಳ್ತಂಗಡಿ: ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರತಿಷ್ಠಿತ ಐಸರ್ ಪ್ರವೇಶ ಪರೀಕ್ಷೆಯಲ್ಲಿ ಮೂಡುಬಿದಿರೆ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯ ವಿದ್ಯಾರ್ಥಿ ಶಿಶಿರ್ ಶೆಟ್ಟಿ ರಾಷ್ಟ್ರಮಟ್ಟದಲ್ಲಿ 17ನೇ ಸ್ಥಾನವನ್ನು ಪಡೆದಿದ್ದು ಸ೦ಸ್ಥೆಗೆ ಕೀರ್ತಿಯನ್ನು ತ೦ದಿರುತ್ತಾನೆ.
ಶಿಶಿರ್ ಈ ವರ್ಷ ನಡೆದ ಕಾಮೆಡ್ ಕೆ ನಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ, ಜೆಇಇ ಅಡ್ವಾನ್ಸ್ಡ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ 664ನೇ ಸ್ಥಾನ, ಸಿಇಟಿ ಇ೦ಜಿನಿಯರ್೦ಗ್ ವಿಭಾಗದಲ್ಲಿ 4ನೇ ಸ್ಥಾನ ಮತ್ತು ದ್ವಿತೀಯ ಪದವಿ ಪೂರ್ವ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 7ನೇ ಸ್ಥಾನ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುತ್ತಾನೆ.
ಶಿಶಿರನ ಸಾಧನೆಗೆ ಸ೦ಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಯುವರಾಜ ಜೈನ್, ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ ಮತ್ತು ಉಪನ್ಯಾಸಕ ವರ್ಗದವರು ಅಭಿನ೦ದನೆ ಸಲ್ಲಿಸಿದ್ದಾರೆ.