ಉಜಿರೆ: ಪ್ರಪ್ರಥಮ ಬಾರಿಗೆ ನಿನಾದ ಕ್ಲಾಸಿಕಲ್ಸ್ ರವರ ವತಿಯಿಂದ ಸಂಗೀತ ಕ್ಷೇತ್ರದಲ್ಲಿ ಪರಿಣಿತ ಹೊಂದಿದ ಗುರುಗಳ ಮಾರ್ಗದರ್ಶನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ತರಗತಿಯು ಜೂ.24ರಂದು ಉಜಿರೆಯ ಎಸ್.ಡಿ.ಎಂ ಕಾಲೇಜು ಎದುರು ಪೆರ್ಲ ರಸ್ತೆಯಲ್ಲಿರುವ ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ನೃತ್ಯಕೇಂದ್ರದಲ್ಲಿ ಶುಭಾರಂಭಗೊಂಡಿತು.

ನೂತನ ಸಂಗೀತ ತರಬೇತಿ ತರಗತಿಯ ಉದ್ಘಾಟನೆಯನ್ನು ಪೆರ್ಲ ಬೈಪಾಡಿ ಶಾಲೆಯ ಶಿಕ್ಷಕಿ ಗಮಕ ವಾದಕಿ ಮೇಧಾ ಕೆ. ನೆರವೇರಿಸಿದರು.


ಎಸ್.ಡಿ.ಎಂ ಕಲಾಕೇಂದ್ರದ ರಂಗಶಿಕ್ಷಕ ಯಶವಂತ್, ಹಿಪ್-ಬಾಯ್ಸ್ ತಂಡದ ಮಾಲಕ ಸಹನ್ ಎಮ್. ಎಸ್., ಸಂಗೀತ ಹಾಗೂ ನೃತ್ಯ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಾನ್ವಿ ಮತ್ತು ಚಿನ್ಮಯಿ ಪ್ರಾರ್ಥಿಸಿದರು. ಕಲಾನ್ವಿತ ನಿರೂಪಿಸಿದರು. ಮಾಲಕಿ ಶ್ರೀದೇವಿ ಸಚಿನ್ ಸ್ವಾಗತಿಸಿ, ಎಲ್ಲರ ಸಹಕಾರವನ್ನು ಕೋರಿ ಧನ್ಯವಾದವಿತ್ತರು.