ನಾರಾವಿ ಸಂತ ಪೌಲಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆ

0

ನಾರಾವಿ: ಸಂತ ಪೌಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-2026ನೇ ಸಾಲಿನ ನೂತನ ವಿದ್ಯಾರ್ಥಿ ಸರಕಾರದ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಜೂ. 24ರಂದು ನೆರವೇರಿತು. ಶಾಲಾ ಸಂಚಾಲಕ ಸ್ವಾಮಿ ಜೆರೊಮ್ ಡಿಸೋಜಾ, ಮುಖ್ಯೋಪಾಧ್ಯಾಯ ರಿಚಾರ್ಡ್ ಮೊರಾಸ್, ಶಾಲಾ ನಾಯಕ ಮಾ| ಆಹನ್ ಜೈನ್ ಹಾಗೂ ಶಾಲಾ ಉಪ ನಾಯಕಿ ಪ್ರಿನ್ಸಿಯ ಡಿಸೋಜಾ ಜ್ಯೋತಿ ಬೆಳಗಿಸುವ ಮುಖೇನ ವಿದ್ಯಾರ್ಥಿ ಸರಕಾರ ಉದ್ಘಾಟನೆಗೊಂಡಿತು.

ನಂತರ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದರು. ಶಾಲಾ ಸಂಚಾಲಾಕ ಜೆರೊಮ್ ಡಿಸೋಜಾ ಶಾಲಾ ಸರಕಾರಕ್ಕೆ ಶುಭ ಹಾರೈಸಿ, ತಮ್ಮ ಜವಾಬ್ದಾರಿಗಳನ್ನು ನೆರವೇರಿಸಿ ಪ್ರತಿಭೆಗಳನ್ನು ಬೆಳಗಿಸಿ ಎಂದು ಹೇಳಿದರು. ಮುಖ್ಯ ಅತಿಥಿ ಆಲ್ವಿನ್ ಸೆರಾವೊ ನೂತನ ಶಾಲಾ ಸರಕಾರಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಚಾಲಕ ಸ್ವಾಮಿ ಜೆರೊಮ್ ಡಿಸೋಜಾ, ಸಂತ ಅಂತೊನಿ ಕಾಲೇಜಿನ ಪ್ರಾಂಶುಪಾಲ ಫಾ| ಆಲ್ವಿನ್ ಸೆರಾವೊ, ನಾರಾವಿ ಪ್ರೌಢಶಾಲೆಯ ಮುಖ್ಯೊಪಾಧ್ಯಾಯ ಗೋಪಾಲಕೃಷ್ಣ ತುಳುಪುಳೆ, ಸಂತ ಪೌಲ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸೋಫಿಯಾ ಫೆರ್ನಾಂಡಿಸ್, ನಾರಾವಿ ಚರ್ಚ್ ಪಾಲನ ಸಮಿತಿಯ ಕಾರ್ಯದರ್ಶಿ ಯೆವ್ಜಿನ್ ರೊಡ್ರಿಗಸ್, ಸಂತ ಪೌಲ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಿಚಾರ್ಡ್ ಮೊರಾಸ್ ಉಪಸ್ಥಿತರಿದ್ದರು. ಶಿಕ್ಷಕಿ ಸಿ| ಸ್ಮಿತಾ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ಲಿಡ್ವಿನ್ ಜಾಸಿಂತಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ರೆನಿಟಾ ವಂದಿಸಿದರು.

LEAVE A REPLY

Please enter your comment!
Please enter your name here