ಮಣಿಪಾಲ: ರಾಷ್ಟ್ರೀಯ ಮಟ್ಟದ ಐಬಿಎಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್

0

ಬೆಳ್ತಂಗಡಿ: ಮಣಿಪಾಲ್ ನಲ್ಲಿ ನಡೆದ 9ನೇ ರಾಷ್ಟ್ರೀಯ ಮಟ್ಟದ ಐಬಿಎಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ದೃಷ್ಟಿ ಸಮಸ್ಯೆ ಇರುವವರ ( visually impaired) ಸ್ಪರ್ಧೆಯಲ್ಲಿ ಬೆಳ್ತಂಗಡಿ, ಸಂತ ಲಾರೆನ್ಸ್ ಕಥಿಡ್ರಲ್ ಧರ್ಮಕೇಂದ್ರದ ನಂದಳತ್ ಸಿರಿಲ್ ಜೋಸೆಫ್ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಜೂ.21 ಹಾಗೂ 22ರಂದು ರಾಷ್ಟ್ರ ಮಟ್ಟದ ಈ ಪಂದ್ಯಾಟ ಮಣಿಪಾಲ್ ನಲ್ಲಿ ನಡೆದಿತ್ತು. ಚಿನ್ನದ ಪದಕದೊಂದಿಗೆ ಪವರ್ ಲಿಫ್ಟಿಂಗ್ ಪ್ರಥಮ ಸ್ಥಾನ ಪಡೆದ ಲಾಯಿಲ ನಿವಾಸಿ ಸಿರಿಲ್ ಜೋಸೆಫ್ ಅವರಿಗೆ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here