ಅರಿಸಿನಮಕ್ಕಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ, ಶಾಲೆಯಲ್ಲಿ ನಿವೃತ್ತ ಮುಖ್ಯ ಗುರು ಸೀತಾರಾಮ ಗೌಡರ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆಯಿತು. ಪ್ರಮುಖ ಆಸನಗಳು, ಮುದ್ರೆಗಳು, ಸೂರ್ಯ ನಮಸ್ಕಾರ ಇತ್ಯಾದಿಗಳಲ್ಲಿ ಇಲ್ಲಿನ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಮುಖ್ಯ ಗುರು ತಲಕೇರಿ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.