ಬೆಳ್ತಂಗಡಿ ಸ. ಪ್ರ. ದ. ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ, ರೋವರ್ ರೇಂಜರ್ಸ್ ಘಟಕ, ಎನ್. ಸಿ. ಸಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲ ಸುರೇಶ್ ವಿ. ನೆರವೇರಿಸಿದರು. ಉತ್ತಮ ಶರೀರ, ಮನಸ್ಸು ನಿರ್ಮಾಣವಾಗಬೇಕಾದರೆ ಯೋಗ ಅತಿ ಮುಖ್ಯ. ಇಂದಿನ ಒತ್ತಡ ಪ್ರೇರಿತ ಜೀವನಕ್ಕೆ ಯೋಗ ಅತಿ ಅವಶ್ಯಕ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಸ್ನಾತಕೋತ್ತರ ವಿಭಾಗದ ಸಂಚಾಲಕ ರವಿ ಎಂ.ಎನ್. ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಯೋಗ ದಿನಾಚರಣೆಯ ಸಂದೇಶವಾದ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗಾಸನ ಎಂಬುದನ್ನು ತಿಳಿಸಿ, ಯೋಗಾಸನದಿಂದ ಮನುಷ್ಯನಲ್ಲಿ ದೇಹ, ಮನಸ್ಸು ಮತ್ತು ಆತ್ಮಗಳ ಸಮತೋಲನವನ್ನು ಕಾಪಾಡಲು ಸಾಧ್ಯ ಎಂದು ತಿಳಿಸಿದರು. ಆನಂತರ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆತೆಯನ್ನು ಮಾಡಿದರು.

ದ್ವಿತೀಯ ಎಂ.ಕಾಂ. ನ ಅನನ್ಯ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ರೇಂಜರ್ ಅಧಿಕಾರಿ ಪ್ರೊ. ರಾಜೇಶ್ವರಿ ಹೆಚ್.ಎಸ್., ಗ್ರಂಥಪಾಲಕ ಜಗದೀಶ್, ಕನ್ನಡ ಪ್ರಾಧ್ಯಾಪಕರಾದ ಸುಧಾರಾಣಿ, ಸುನೀತಾ ಹಾಗೂ ಕಚೇರಿ ಅಧ್ಯಕ್ಷೆ ದಿವ್ಯ ಮೋಹನ್ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರ ಜೊತೆಗೆ ಕಚೇರಿ ಸಿಬ್ಬಂದಿಗಳಾದ ಪ್ರಣಮ್ಯ ಜೈನ್, ಸಂಧ್ಯಾ ಹಾಗೂ ಅರವಿಂದ್ ಯೋಗಾಸನದ ಪ್ರಾತ್ಯಕ್ಷಿತೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here