ಬೆಳ್ತಂಗಡಿ: ಕಕ್ಕಿಂಜೆ ಶ್ರೀ ಕೃಷ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಮಾನ್ಯತೆ ಘೋಷಣೆ, ನವೀಕೃತ ಸುಧಾರಿತ ಪ್ರಯೋಗಾಲಯ ವಿಭಾಗ ಹಾಗೂ ಬಿರ್ಲಾ ಫರ್ಟಿಲಿಟಿ ಮತ್ತು ಐ.ವಿ.ಎಫ್ ಸೆಂಟರ್ ಉದ್ಘಾಟನಾ ಸಮಾರಂಭ ಜೂ.17ರಂದು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ನಡೆಯಿತು.


ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಚಕ್ರಪಾಣಿ ಎಂ. ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಮುರಳಿಕೃಷ್ಣ ಇರ್ವತ್ರಾಯ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.


ಮುಖ್ಯ ಆತಿಥಿಗಳಾಗಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸ್ವರ್ಣಲತಾ ಮತ್ತು ಮಂಗಳೂರು ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಮುಖ್ಯ ಇನ್ಫರ್ಟಿಲಿಟಿ ಕನ್ಸಲ್ಟೆಂಟ್ ಡಾ. ಗೌರವ್ ಗುಜರಾತಿ, ಬೆಳ್ತಂಗಡಿ ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಜಪ್ರಸಾದ ಪೊಳ್ನಾಯ, ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವಂದನಾ ಎಂ. ಇರ್ವತ್ರಾಯ, ಆಡಳಿತಾಧಿಕಾರಿ ಜ್ಯೋತಿ ವಿ. ಸ್ವರೂಪ್ ಉಪಸ್ಥಿತರಿದ್ದರು.
ಸಂಧ್ಯಾ, ಪ್ರತಿಮಾ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಆರೀಸ್ ನಿರೂಪಿಸಿದರು. ಡಾ. ವಂದನಾ ಎಂ. ಇರ್ವತ್ರಾಯ ವಂದಿಸಿದರು.