ಕಳಿಯ: ಗ್ರಾಮ ಪಂಚಾಯತ್ ನ ಅನುದಾನದಿಂದ ಹದಗೆಟ್ಟ ಗೇರುಕಟ್ಟೆ ಹೈಸ್ಕೂಲ್ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಲಾಯಿತು. ಕಾಮಗಾರಿಯನ್ನು ಪಂಚಾಯತ್ ಅಧ್ಯಕ್ಷ ದಿವಾಕರ ಎಂ., ಸದಸ್ಯರಾದ ಅಬ್ದುಲ್ ಕರೀಮ್, ಕಾರ್ಯದರ್ಶಿ ಕುಂಙ ಕೆ., ಸಿಬ್ಬಂದಿ ಸುರೇಶ್ ಗೌಡ ಹಾಗೂ ಸ್ಥಳೀಯರಾದ ರತ್ನಾಕರ ಬಳ್ಳಿದಡ್ಡ, ಮಹಮ್ಮದ್ (ಪುತ್ತಾಕ) ಪರಿಶೀಲಿಸಿದರು.