ಶಿಶಿಲ: ಶಿಶಿಲೇಶ್ವರ ದೇವಸ್ಥಾನದ ಆಡಳಿತ ಮಂಡಳಿ ರಚನೆ ವಿಳಂಬ: ಅಭಿವೃದ್ಧಿ ವಂಚಿತವಾಗುತ್ತಿದೆ ದೇವಾಲಯ: ಶೀಘ್ರ ಆಡಳಿತ ಮಂಡಳಿ ರಚಿಸದಿದ್ದಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆಯ ಎಚ್ಚರಿಕೆ

0

ಶಿಶಿಲ: ಇತಿಹಾಸ ಪ್ರಸಿದ್ಧ ಶ್ರೀ ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆಗೆ ಎರಡು ವರ್ಷಗಳಿಂದ ಮೀನ ಮೇಷ ನಡೆಯುತ್ತಿದೆ.

ಜೀರ್ಣೋದ್ಧಾರ ಮತ್ತು ಎರಡು ಬ್ರಹ್ಮಕಲಶವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕೀರ್ತಿ ಗ್ರಾಮಸ್ಥರಿದ್ದು, ಇದೀಗಿನ ರಾಜಕೀಯ ವ್ಯವಸ್ಥೆಯಿಂದ ಇನ್ನೂ ವ್ಯವಸ್ಥಾಪನಾ ಸಮಿತಿಯು ರಚನೆಯಾಗದೆ ಬಾಕಿಯಿರುವುದಾಗಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಿತಿ ಇಲ್ಲದೆ ದೇವಾಲಯದ ಎಲ್ಲಾ ಅಭಿವೃದ್ಧಿ ಕಾರ್ಯ ನಿಂತಿದೆ. ಸಾವಿರಾರು ಊರ ಪರವೂರಿಂದ ಭಕ್ತಾದಿಗಳು ಬರುತ್ತಿದ್ದಾರೆ. ಅನ್ನ ದಾಸೋಹ ನಡೆಯುತ್ತಿದೆ. ಕೃಷಿ ನಿರ್ವಹಣೆ ಆಗಬೇಕಾಗಿದೆ. ಆದರೂ ಸಮಿತಿ ರಚನೆ ಆಗಿಲ್ಲ.

ಮುಜರಾಯಿ ಇಲಾಖೆಯನ್ನು ಸಂಪರ್ಕಿಸಿದರೆ ಜವಾಬ್ದಾರಿ ಉತ್ತರವಿಲ್ಲ. ಗ್ರಾಮದ ಊರ ಪರವೂರ ದಾನಿಗಳಿಂದ ಅಭಿವೃದ್ಧಿ ಆಗಿರುವ ಈ ಪುಣ್ಯಕ್ಷೇತ್ರಕ್ಕೆ ಈ ರೀತಿಯ ಸಮಿತಿ ರಚನೆಗೆ ಯಾಕೆ ತಡವಾಗುತ್ತಿದೆ ಎಂಬ ಮಾಹಿತಿ ಇಲ್ಲ.

ಆದುದರಿಂದ ಕೂಡಲೆ ವ್ಯವಸ್ಥಾಪನಾ ಸಮಿತಿ ರಚಿಸುವಂತೆ ಭಕ್ತರು ಆಗ್ರಹಿಸಿದ್ದಾರೆ. ಹಾಗೂ ಮುಜರಾಯಿ ಇಲಾಖೆಗೂ ಮಾಹಿತಿ ನೀಡಿರುತ್ತಾರೆ.

ತಪ್ಪಿದ್ದಲ್ಲಿ ಗ್ರಾಮದ ಭಕ್ತಾಧಿಗಳು ಊರ ಭಕ್ತರ ಸಭೆ ಕರೆದು ಪ್ರತಿಭಟನೆಗೆ ಮುಂದಾಗುವುದಾಗಿ ಮಾಜಿ
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶಿಶಿಲ ಬಿ.ಜಯರಾಮ ನೆಲ್ಲಿತ್ತಾಯ ಮತ್ತು ಕರುಣಾಕರ ಶಿಶಿಲ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here