ಬೆಳಾಲು: ಪೆರಿಯಡ್ಕ ಶಾಲಾ ಪ್ರಾರಂಭೋತ್ಸವ

0

ಬೆಳಾಲು: ಸ.ಕಿ.ಪ್ರಾ ಶಾಲೆ ಪೆರಿಯಡ್ಕ ಬೆಳಾಲು ಶಾಲಾ ಪ್ರಾರಂಭೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಶಾಲಾ ಶಿಕ್ಷಕ ವೃಂದದವರು ವಿದ್ಯಾರ್ಥಿಗಳನ್ನು ಆರತಿ ಬೆಳಗಿ ಹಣೆಗೆ ತಿಲಕವನ್ನಿಟ್ಟು ಸ್ವಾಗತಿಸಿದರು .

ಈ ಸಂದರ್ಭದಲ್ಲಿ ಶಾಲಾ ದಾನಿಗಳಾದ ಜಯಣ್ಣಗೌಡ ಮಿನಂದೇಲು ಇವರು ವಿದ್ಯಾರ್ಥಿಗಳಿಗೆ ಕೊಡ ಮಾಡಿದ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಆ ಬಳಿಕ ನಡೆದ ಪೋಷಕರ ಸಭೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪ್ರಸಾದ್ ಗೌಡ ಹಾಗೂ ಪುಟಾಣಿ ವಿದ್ಯಾರ್ಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು.

ಇಲಾಖೆಯಿಂದ ಕೊಡ ಮಾಡಿದ ಉಚಿತ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

LEAVE A REPLY

Please enter your comment!
Please enter your name here