ಕುಕ್ಕೇಡಿ ಸ.ಹಿ.ಪ್ರಾ. ಶಾಲಾ ಪ್ರಾರಂಭೋತ್ಸವ

0

ಕುಕ್ಕೇಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕೆಡಿಯಲ್ಲಿ ಶಾಲಾ ಪ್ರಾರಂಭೋತ್ಸವ ಜೂ. 2ರಂದು ನಡೆಯಿತು. ವಿದ್ಯಾರ್ಥಿಗಳಿಗೆ ಬಲೂನ್, ಕಲಿಕಾ ಸಾಮಗ್ರಿ, ಟೋಪಿಯನ್ನು ಧರಿಸಿ ಹಾಗೂ ಆರತಿ ಬೆಳಗುದರ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

ಶಾಲೆ ಹಳೆ ವಿದ್ಯಾರ್ಥಿ ವಸಂತ ಪೇರ್ಡೆ ವಿದ್ಯಾರ್ಥಿಗಳ ಕಂಪ್ಯೂಟರ್ ಶಿಕ್ಷಣಕ್ಕಾಗಿ ಒಂದು ಲ್ಯಾಪ್ಟಾಪ್ ನ್ನು ಎಸ್. ಡಿ. ಎಮ್. ಸಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಅಧ್ಯಕ್ಷತೆಯನ್ನು ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ಕೃಷ್ಣಪ್ಪ ಉಜ್ಜಲ್ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ಗೋಪಾಲ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಮ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಸರೋಜಿನಿ, ಎಸ್‌.ಡಿ.ಎಂ.ಸಿ ಉಪಾಧ್ಯಕ್ಷೆ ವೇದಾವತಿ, ಶಾಲಾ ಮುಖ್ಯ ಶಿಕ್ಷಕ ಸತೀಶ್ ಉಪಸ್ಥಿತರಿದ್ದರು.

ಸರಕಾರದಿಂದ ನೀಡಿದ ಉಚಿತ ಪಠ್ಯಪುಸ್ತಕವನ್ನು ಹಾಗೂ ರೋಹಿತ್ ಕುಂಟಿಯಾನ್ ನೀಡಿದ ಉಚಿತ ನೋಟ್ ಪುಸ್ತಕವನ್ನು, ಕೃಷ್ಣಪ್ಪ ಉಜ್ಜಲ್ ರವರು ನೀಡಿದ ಕಲಿಕಾ ಉಪಕರಣವನ್ನು ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉದಯ ಗೋಳಿಯಂಗಡಿ ನೀಡಿದ ಉಚಿತ ನೋಟ್ ಪುಸ್ತಕವನ್ನು ವಿತರಿಸಲಾಯಿತು. ಗೌರವ ಶಿಕ್ಷಕಿ ಆಶಾಲತಾ ವಂದಿಸಿದರು.

LEAVE A REPLY

Please enter your comment!
Please enter your name here