ಅನುಗ್ರಹ ಶಾಲಾ ಶಿಕ್ಷಕರಿಗೆ ಕಾರ್ಯಾಗಾರ

0

ಉಜಿರೆ: ಅನುಗ್ರಹ ಶಾಲೆಯ ಶಿಕ್ಷಕರಿಗೆ ‘ಶಿಕ್ಷಣದಲ್ಲಿ ತಂತ್ರಜ್ಞಾನ’ ಹಾಗೂ ‘ಭಾಷಾ ಕೌಶಲ್ಯ’ ವಿಷಯದ ಕುರಿತಾಗಿ ಒಂದು ದಿನದ ಕಾರ್ಯಗಾರವು ನಡೆಯಿತು. ವಿಷಯದ ಕುರಿತಾಗಿ ಫಾ! ಸ್ಪ್ಯಾನಿ ಪಿಂಟೊ ಹಾಗೂ ಫಾ! ಅಶ್ವಿನ್ ಕಾರ್ಡೊಜಾ ಪ್ರಾಯೋಗಿಕವಾಗಿ ಮಾಹಿತಿ ಹಂಚಿಕೊಂಡರು. ಕಾರ್ಯಗಾರದಲ್ಲಿ ಶಿಕ್ಷಣ ಸಂಸ್ಥೆಯ ಸಂಚಾಲಕ ಫಾ! ಅಬೆಲ್ ಲೋಬೊ ಹಾಗೂ ಪ್ರಾಂಶುಪಾಲ ಫಾ! ವಿಜಯ್ ಲೋಬೊ ಉಪಸ್ಥಿತರಿದ್ದು, ಶಿಕ್ಷಕರಿಗೆ ಶುಭ ಹಾರೈಸಿದರು. ಶಿಕ್ಷಕಿ ಜಸಿಂತ ಡಿ’ಕೋಸ್ಟ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here