ಕಕ್ಕಿಂಜೆ: ಇಲ್ಲಿನ ಸೀತಾ ಕಾಂಪ್ಲೆಕ್ಸ್ ನಲ್ಲಿ ‘ಪೈ ಅಕಾಡೆಮಿಯ’ ನೂತನ ಶಾಖೆಯು ಮೇ.28ರಂದು ಶುಭಾರಂಭಗೊಂಡಿತು. ಲಕ್ಷ್ಮೀ ದೇವಿ ಪೈ ರಿಬ್ಬನ್ ಕತ್ತರಿಸಿ ಶುಭ ಹಾರೈಸಿದರು. ಸಂಸ್ಥೆಯ ಸಂಸ್ಥಾಪಕಿಯಾದ ಚೈತ್ರಾ ಪೈ ಹಾಗೂ ಸ್ವಾತಿ ಪೈ ಯವರು ದೀಪ ಬೆಳಗಿಸಿದರು.
ಬೆಳ್ತಂಗಡಿ ಹಾಗೂ ಉಜಿರೆಯಲ್ಲಿ ಅತ್ಯಂತ ಯಶಸ್ವಿಯಾಗಿ ವಿದ್ಯಾರ್ಥಿಗಳಿಗೆ ತರಗತಿಯನ್ನು ನಡೆಸಿ ವಿದ್ಯಾರ್ಥಿ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾದ ಪೈ ಅಕಾಡೆಮಿಯು, ಸ್ಥಳೀಯ ಪೋಷಕರ ವಿನಂತಿ ಮತ್ತು ಸಹಕಾರದ ಮೇರೆಗೆ ನೂತನ ಶಾಖೆಯ ಕನಸನ್ನು ಕಟ್ಟಿತ್ತು. ನೂತನ ಶಾಖೆಯಲ್ಲಿ ಪ್ರಸ್ತುತ ಎಲ್.ಕೆ.ಜಿ(LKG)ಯಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತರಗತಿಯನ್ನು ನಡೆಸುವ ಉದ್ದೇಶವಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ಚೈತ್ರ ಎಸ್. ಪೈ ತಿಳಿಸಿದರು.
ಚೈತ್ರ ಎಸ್. ಪೈ ಅವರ ಪತಿ “ಪೈ ಸ್ವೀಟ್ಸ್” ಸಂತೆಕಟ್ಟೆಯ ಮಾಲಕ ಬಿ. ಸತೀಶ್ ಪೈ ಹಾಗೂ ಪೈ ಕುಟುಂಬದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.